ಆದಿತ್ಯ ಅಭಿನಯದ ಸಿನಿಮಾವೊಂದನ್ನು ಎಸ್. ನಾರಾಯಣ್ ನಿರ್ದೇಶಿಸುವ ಸಾಧ್ಯತೆ ಇದೆ ಎಂಬ ಮಾತು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಎಸ್. ನಾರಾಯಣ್ ಕೂಡಾ ಹೇಳಿದ್ದರು. ಆದರೆ ಆ ಚಿತ್ರ ಅರಂಭವಾಗಿರಲಿಲ್ಲ. ಆದರೆ ಇದೀಗ 2021 ಜನವರಿ 1 ರಂದು ಹೊಸ ಚಿತ್ರವನ್ನು ಆರಂಭಿಸುವುದಾಗಿ ಎಸ್. ನಾರಾಯಣ್ ಘೋಷಿಸಿದ್ದಾರೆ.
ಬಹಳ ದಿನಗಳ ನಂತರ ಹೊಸ ಸಿನಿಮಾವೊಂದನ್ನು ಘೋಷಿಸಿದ ನಿರ್ದೇಶಕ ಎಸ್. ನಾರಾಯಣ್ - ಎಸ್ ನಾರಾಯಣ್ ಹೊಸ ಸಿನಿಮಾ
ಬಹಳ ದಿನಗಳಿಂದ ಸಿನಿಮಾ ನಿರ್ದೇಶನದಿಂದ ದೂರ ಉಳಿದಿದ್ದ ಎಸ್. ನಾರಾಯಣ್, ಈಗ ಹೊಸ ಸಿನಿಮಾವೊಂದನ್ನು ಘೋಷಿಸಿದ್ದಾರೆ. ಆದರೆ ಅದು ಯಾವ ಸಿನಿಮಾ, ಕಲಾವಿದರು ಯಾರು ಎಂಬುದರ ಬಗ್ಗೆ ನಾರಾಯಣ್ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕೆಲವೇ ದಿನಗಳಲ್ಲಿ ಈ ಬಗ್ಗೆ ತಿಳಿಸುವುದಾಗಿ ನಾರಾಯಣ್ ಹೇಳಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ತಮ್ಮ ಮಗ ಪಂಕಜ್ ಅಭಿನಯದ ಸಿನಿಮಾವೊಂದನ್ನು ಎಸ್.ನಾರಾಯಣ್ ಆರಂಭಿಸಿದ್ದರು. ಆದರೆ ಆ ಸಿನಿಮಾ ಪೂರ್ತಿಯಾಗಲಿಲ್ಲ. ಆ ಸಿನಿಮಾ ಬಿಟ್ಟು ಹೊಸ ಸಿನಿಮಾವೊಂದನ್ನು ನಾರಾಯಣ್ ನಿರ್ದೇಶಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಕೊನೆಗೂ ಆ ಚಿತ್ರ ಮಾಡುತ್ತಿರುವುದಾಗಿ ನಾರಾಯಣ ಈಗ ಹೇಳಿದ್ದಾರೆ. ಈ ಸಿನಿಮಾ ಯಾವುದು...? ಕಲಾವಿದರು ಯಾರು..? ಯಾರು ನಿರ್ಮಾಣ ಮಾಡುತ್ತಾರೆ..? ಎಂಬುದು ಸೇರಿ ಬೇರೆ ಯಾವ ವಿಚಾರವನ್ನೂ ಎಸ್. ನಾರಾಯಣ್ ಬಿಟ್ಟುಕೊಟಿಲ್ಲ. ಈ ಹಿಂದೆ ಘೋಷಿಸಿದ್ದ ಆದಿತ್ಯ ಅಭಿನಯದ ಚಿತ್ರವನ್ನೇ ಅವರು ಪ್ರಾರಂಭಿಸುವುದಕ್ಕೆ ಹೊರಟಿದ್ದಾರಾ ಅಥವಾ ಇದು ಹೊಸ ಸಿನಿಮಾನಾ ಎಂಬುದರ ಬಗ್ಗೆ ನಾರಾಯಣ್ ಮಾತನಾಡುತ್ತಿಲ್ಲ. ಸದ್ಯದಲ್ಲೇ ಒಂದಿಷ್ಟು ಹೊಸ ವಿಷಯಗಳೊಂದಿಗೆ ಮಾಧ್ಯಮದ ಎದುರು ಬರುವುದಾಗಿ ಅವರು ಹೇಳಿಕೊಂಡಿದ್ದಾರೆ. ಚಿತ್ರದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವ ನಾರಾಯಣ್, ಸದ್ಯದಲ್ಲೇ ಈ ವಿಚಾರದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.