ಕರ್ನಾಟಕ

karnataka

ETV Bharat / sitara

ಚಿತ್ರರಂಗದಲ್ಲಿ ದುಡಿಯುವವರಿಗೆ ಹೆಲ್ತ್ ಕಾರ್ಡ್... ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದ ರೂಪಾ ಅಯ್ಯರ್ - ಸಹ ಕಲಾವಿದರು

ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವವರ ಕುಟುಂಬದವರಿಗಾಗಿ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ 'ಆಯುಷ್ಮಾನ್‌ ಭಾರತ್‌' ಯೋಜನೆ ಆರೋಗ್ಯ ಕಾರ್ಡುಗಳನ್ನು ಕೊಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ರೂಪ ಅಯ್ಯರ್

By

Published : Sep 8, 2019, 7:50 PM IST

ರೂಪಾ ಐಯ್ಯರ್ ಚಿತ್ರಗಳಲ್ಲಿ ನಟನೆ, ನಿರ್ಮಾಣ ಹಾಗೂ ನಿರ್ದೇಶನದ ಜೊತೆಗೆ ಹಲವು ಸಮಾಜ‌ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. 'ಮುಖಪುಟ' ಎಂಬ ಸಿನಿಮಾ ಮೂಲಕ ಹೆಚ್​​​ಐವಿ ಮಕ್ಕಳ ಕಥೆಯನ್ನು ಹೇಳಿ ಅವರ ಕಷ್ಟಕ್ಕೆ ರೂಪಾ ಶ್ರಮಿಸಿದ್ದರು.

'ಆಯುಷ್ಮಾನ್‌ ಭಾರತ್‌' ಯೋಜನೆ ಆರೋಗ್ಯ ಕಾರ್ಡ್ ವಿತರಣೆ

ನಮ್ಮ ಮನೆ, ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ, ಬ್ರಹ್ಮಜ್ಞಾನ ಪೀಠ ದೇವ, ಬ್ರಾಹ್ಮಣ ಸಮುದಾಯ ಎಂಬ ಟ್ರಸ್ಟ್​​​​ಗಳ ಮೂಲಕ ರೂಪಾ ಐಯ್ಯರ್ ತಮ್ಮ ಕೈಲಾದ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಆಯುಷ್ಮಾನ್‌ ಭಾರತ್‌' ಯೋಜನೆ ಆರೋಗ್ಯ ಕಾರ್ಡುಗಳನ್ನು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ ರೂಪಾ. ಈ ಕಾರ್ಡ್ ಇದ್ದರೆ ಕುಟುಂಬದ ಯಾವುದೇ ಸದಸ್ಯರು ಅನಾರೋಗ್ಯಕ್ಕೀಡಾದರೆ ಅಥವಾ ಶಸ್ತ್ರಚಿಕಿತ್ಸೆ ಮಾಡಿಸಬೇಕಿದ್ದರೆ ವಾರ್ಷಿಕ ಒಂದು ಕುಟುಂಬಕ್ಕೆ 5 ಲಕ್ಷ ರೂಪಾಯಿ ವೆಚ್ಚದವರೆಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಅಂದರೆ ಈ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಸದ್ಯಕ್ಕೆ ಈ ಕಾರ್ಯಕ್ರಮ ಚಾಮರಾಜಪೇಟೆಯಲ್ಲಿರುವ ಕನ್ನಡ ಕಲಾವಿದರ ಸಂಘದಲ್ಲಿ ಜರುಗುತ್ತಿದೆ. ಚಿತ್ರರಂಗದ ತಂತ್ರಜ್ಞರು, ಸಹ ಕಲಾವಿದರು, ಮೇಕಪ್ ಆರ್ಟಿಸ್ಟ್, ಸಹ ನೃತ್ಯಗಾರರು, ಸ್ಟಿಲ್ ಫೋಟೋಗ್ರಾಫರ್​​​ಗಳು, ನಿರ್ದೇಶಕರು, ನಿರ್ಮಾಪಕರು, ಗಾಯಕರು, ಸ್ಟಂಟ್ ಕಲಾವಿದರು, ಆರ್ಟ್ ಡಿಪಾರ್ಟ್​ಮೆಂಟ್ ಕುಟುಂಬದವರು ಈ ಹೆಲ್ತ್‌ ಕಾರ್ಡನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸುಮಾರು 8 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಈ ಆಯುಷ್ಮಾನ್ ಭಾರತ್ ಯೋಜನೆ‌ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಈ ವಿಮೆ ಪಡೆಯಲು ಸ್ವತಃ ರೂಪಾ ಐಯ್ಯರ್ ತಾಯಿ ಬಹಳ ತೊಂದರೆ ಪಟ್ಟರಂತೆ. ಹೀಗಾಗಿ ಇಂತಹ ತೊಂದರೆ ಬೇರೆಯವರಿಗೆ ಆಗಬಾರದು ಎಂಬ ಉದ್ದೇಶಕ್ಕೆ ರೂಪಾ ಅಯ್ಯರ್ ಮುಂದೆ ನಿಂತು ಎಲ್ಲರಿಗೂ ಈ ಕಾರ್ಡ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

ABOUT THE AUTHOR

...view details