ಕನ್ನಡ ಚಿತ್ರರಂಗದಲ್ಲಿ ದಯವಿಟ್ಟು ಗಮನಿಸಿ ಸಿನಿಮಾ ಮಾಡಿ ಗಮನ ಸೆಳೆದಿದ್ದ ನಿರ್ದೇಶಕ ರೋಹಿತ್ ಪದಕಿ, ಇದೀಗ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾವನ್ನ ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.
ರತ್ನನ್ ಪ್ರಪಂಚ ಸಿನಿಮಾ, ಚಿತ್ರಮಂದಿಗಳಲ್ಲಿ ರಿಲೀಸ್ ಆಗದೇ ನೇರವಾಗಿ OTTಯಲ್ಲಿ ಬಿಡುಗಡೆ ಆಗಿ ಕೋಟ್ಯಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಒಬ್ಬ ಮಧ್ಯಮ ವರ್ಗದ ಹುಡುಗನ ಸಮಸ್ಯೆ ಜೊತೆಗೆ ಅಮ್ಮನ ಪ್ರೀತಿಯ ಕಥೆಯನ್ನ ಒಳಗೊಂಡಿರುವ ರತ್ನನ್ ಪ್ರಪಂಚ ಸಿನಿಮಾ, ಸೂಪರ್ ಹಿಟ್ ಆಗಿದೆ. ನಿರ್ಮಾಪಕರಾಕದ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಾಣದಲ್ಲಿ ಬಂದ, ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಸಿನಿಮಾ ಇದಾಗಿದೆ. ರತ್ನನ್ ಪ್ರಪಂಚ ಸಿನಿಮಾ ಸೂತ್ರದಾರ ರೋಹಿತ್ ಪದಕಿ, ಸಿನಿಮಾ ಯಶಸ್ಸಿನ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.
ನಿರ್ದೇಶಕ ರೋಹಿತ್ ಪದಕಿ ಹೇಳುವ ಹಾಗೇ, ಈ ಸಿನಿಮಾದ ಕಥೆಯನ್ನ ಮಾಡಿದ ಬಳಿಕ ಆಯಾ ಪಾತ್ರಕ್ಕೆ ಕಲಾವಿದರನ್ನ ಆಯ್ಕೆ ಮಾಡಿದ್ರಂತೆ. ಇನ್ನು ಡಾಲಿ ಧನಂಜಯ್ ಅವರನ್ನ ರಗಡ್ ಹಾಗೂ ಲವರ್ ಬಾಯ್ ಪಾತ್ರದಲ್ಲಿ ನೋಡಿದ್ವಿ. ಆದರೆ, ಧನಂಜಯ್ ಒಳಗೆ ಒಂದು ಮುಗ್ಧತೆ ಇದೆ. ಆ ಮುಗ್ಧತನದ ಮೇಲೆ ರತ್ನನ್ ಪ್ರಪಂಚ ಸಿನಿಮಾ ಕ್ಯಾರೀ ಆಗುತ್ತೆ ಎಂದು ಹೇಳಿದರು.