ಕರ್ನಾಟಕ

karnataka

ETV Bharat / sitara

ರಿಷಬ್ ಶೆಟ್ಟಿ ಮಗನ ಲ್ಯಾಂಬೋರ್ಗಿನಿ ಕಾರು ನೋಡಿದ್ರಾ? - Director Rishabh Shetty's son Ranvith video

ನಟ, ನಿರ್ದೇಶಕ ರಿಷಬ್ ಶೆಟ್ಟಿ, ಎರಡು ವರ್ಷದ ರಣ್ವಿತ್​ಗೆ ಕೋಟ್, ಟೈ, ಶೂ ಹಾಕಿಸಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಎಂಟ್ರಿ ಕೊಡುವ ವಿಡಿಯೋಂದನ್ನು ಮಾಡಿದ್ದಾರೆ. ಪುಟಾಣಿ ರಣ್ವಿತ್ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೀರೋ ತರ ಪೋಸ್ ಕೊಟ್ಟಿದ್ದಾನೆ.

Rishabh Shetty's son Ranv
ರಿಷಬ್ ಶೆಟ್ಟಿ ಮಗ ರಣ್ವಿತ್

By

Published : Apr 7, 2021, 2:15 PM IST

ಕಿರಿಕ್ ಪಾರ್ಟಿ, ಬೆಲ್ ಬಾಟಮ್, ಹೀರೋ‌ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ, ಸದ್ಯ ಬೆಲ್ ಬಾಟಮ್-2 ಹಾಗು ಹರಿಕಥೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ರಿಷಬ್ ಶೆಟ್ಟಿ ಮಗನ ಲ್ಯಾಂಬೋರ್ಗಿನಿ ಕಾರು

ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆ ರಿಷಬ್ ಶೆಟ್ಟಿ ತಮ್ಮ ಮುದ್ದು ಮಗ ರಣ್ವಿತ್​ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಮಗನ ಹೆಸರನ್ನು ಸಿನಿಮಾ ಟೀಸರ್ ಹಾಗೆಯೇ ರಿವೀಲ್ ಮಾಡಿದ್ದ ರಿಷಬ್ ಶೆಟ್ಟಿ, ಇದೀಗ ರಣ್ವಿತ್ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸದಾ ನೆನಪಿನಲ್ಲಿ ಉಳಿಯವ ಹಾಗೆ ಮಾಡಿದ್ದಾರೆ‌.

ಎರಡು ವರ್ಷದ ರಣ್ವಿತ್​ಗೆ ಶೂಟ್​, ಟೈ, ಶೂ ಹಾಕಿಸಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಎಂಟ್ರಿ ಕೊಡುವ ವಿಡಿಯೋಂದನ್ನು ಮಾಡಿದ್ದಾರೆ. ಪುಟಾಣಿ ರಣ್ವಿತ್ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೀರೋ ತರ ಪೋಸ್ ಕೊಟ್ಟಿದ್ದಾನೆ.

ಈ ವಿಡಿಯೋವನ್ನ‌ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮಕ್ಕಳು ಗೊಂಬೆಗೆ ಬಟ್ಟೆ ತೊಡಿಸಿ ಆಟ ಆಡಿದ್ರೆ, ಗೊಂಬೆಯಂತೆ ಮುದ್ದಾದ ಮಗುವಿಗೆ ಚೆಂದದ ಬಟ್ಟೆ ತೊಡಿಸಿ ಆನಂದಿಸೋದು ದೊಡ್ಡವರ ಮಕ್ಕಳಾಟ. ಇವತ್ತು ನಮ್ಮ‌ ಬಂಗಾರಿಗೆ ಎರಡು ವರ್ಷ ತುಂಬಿದೆ. ಈ ಸಂಭ್ರಮದಲ್ಲಿ ನಾನು-ಪ್ರಗತಿ ಆಡಿದ ಮಕ್ಕಳಾಟವನ್ನ ಹಂಚಿಕೊಂಡಿದ್ದೇನೆ. ನಮ್ಮನೆಯ ಹೀರೋಗೆ ನಿಮ್ಮ ಹಾರೈಕೆ ಇರಲಿ ಅಂತ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

ಓದಿ:ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ

ABOUT THE AUTHOR

...view details