ಕರ್ನಾಟಕ

karnataka

ETV Bharat / sitara

ಚುರುಕುಗೊಂಡ 'ರುದ್ರಪ್ರಯಾಗ'​​.... ಹೊಸ ಚಿತ್ರದ ಬಗ್ಗೆ ಈ ಟಿವಿ ಭಾರತ್ ಜತೆ ಶೆಟ್ಟರ ಮಾತು - undefined

ಸಕ್ಸಸ್​​ಫುಲ್ ಡೈರೆಕ್ಟರ್ ರಿಷಭ್ ಶೆಟ್ಟಿ ತಮ್ಮ ಹೊಸ ಸಿನಿಮಾ 'ರುದ್ರ ಪ್ರಯಾಗ'ದ ಬಗ್ಗೆ ಈಟಿವಿ ಭಾರತ್ ಜತೆ ಮಾತನಾಡಿದ್ದಾರೆ.

ರುದ್ರಪ್ರಯಾಗ

By

Published : Jul 12, 2019, 11:00 AM IST

ಸದ್ಯ ಸ್ಯಾಂಡಲ್​ವುಡ್​​​ಲ್ಲಿ ಯಶಸ್ವಿ ನಟ, ನಿರ್ದೇಶಕರ ಸಾಲಿನಲ್ಲಿ ನಿಂತಿರುವ ರಿಷಭ್​ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ನಂತರ 'ರುದ್ರಪ್ರಯಾಗ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.

ಫಸ್ಟ್​ ಪೋಸ್ಟರ್​ ಮೂಲಕವೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿರುವ 'ರುದ್ರಪ್ರಯಾಗ'ದ ಬಗ್ಗೆ ಸ್ಯಾಂಡಲ್​​ವುಡ್​ನ ಶೆಟ್ರು ಈಟಿವಿ ಭಾರತ್ ಜತೆ ಮಾತನಾಡಿದ್ದಾರೆ. ತಾವು ನಾಯಕನಾಗಿ ನಟಿಸಲಿರುವ 'ಆಂಟಗೋನಿ ಶೆಟ್ಟಿ' ಮೊದಲೇ 'ರುದ್ರಪ್ರಯಾಗ' ಚಿತ್ರ ಸೆಟ್ಟೇರಲಿದೆ ಎನ್ನುವ ರಿಷಭ್ ಶೆಟ್ಟಿ, ಸದ್ಯ ಎರಡು ಚಿತ್ರಗಳ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದೇನೆ. ಈ ಚಿತ್ರಗಳು ಮುಗಿದ ನಂತರ 'ರುದ್ರಪ್ರಯಾಗ' ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದಾರೆ.

ರುದ್ರಪ್ರಯಾಗ ಚಿತ್ರದ ಬಗ್ಗೆ ಈಟಿವಿ ಭಾರತ್ ಜತೆ ಶೆಟ್ಟರ ಮಾತು

ಅಲ್ಲದೆ ರುದ್ರಪ್ರಯಾಗ ಚಿತ್ರದ ಸ್ಕ್ರಿಪ್ಟ್ ವರ್ಕ್ ಕೂಡ ತುಂಬಾ ಎಕ್ಸೈಟ್ ಆಗಿ ನಡೆಯುತ್ತಿದೆಯಂತೆ. ಇನ್ನೆರಡು ದಿನಗಳಲ್ಲಿ ಚಿತ್ರಕ್ಕೆ ಪೂರಕವಾದ ಲೋಕೇಶನ್​​​ಗಳ ಹಂಟಿಂಗ್ ಶುರುಮಾಡಲಿರುವ ರಿಷಭ್​, ಈ ಬಾರಿ ಥ್ರಿಲ್ಲರ್​​ ಜಾನರ್​​ನ ಎಂದಿದ್ದಾರೆ. ಈ ಬಾರಿ ಹೊಸ ಬಗೆಯ ಚಿತ್ರಕ್ಕೆ ಕೈ ಹಾಕಿದ್ದೇನೆ,ಇನ್ನೆರಡು ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎಂದು ಅವರು ತಿಳಿಸಿದರು.

ಇಷ್ಟೆಲ್ಲ ಹೇಳಿರುವ ರಿಷಭ್ ಶೆಟ್ಟಿ ಚಿತ್ರ ಕಥೆ, ತಾರಾಗಣದ ಬಗ್ಗೆ ಯಾವ ಸುಳಿವು ಬಿಟ್ಟುಕೊಡಲಿಲ್ಲ. ಅತಿಶೀಘ್ರದಲ್ಲೇ ಬ್ಯೂಟಿಫುಲ್ ಪೋಸ್ಟರ್ ಮೂಲಕವೇ ಎಲ್ಲವನ್ನೂ ರಿವೀಲ್ ಮಾಡುವುದಾಗಿ ಹೇಳಿ, ಮತ್ತಷ್ಟು ಕುತೂಹಲ ಹೆಚ್ಚಿಸಿದರು.

For All Latest Updates

TAGGED:

ABOUT THE AUTHOR

...view details