ನಿರ್ದೇಶಕ ರಾಮ್ಗೋಪಾಲ್ ವರ್ಮಾ ತೆಲುಗು ನಟಿಯರ ಮೇಲೆ ಶಾಂಪೇನ್ ಚೆಲ್ಲಿ ತಾವೂ ಸುರಿದುಕೊಂಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಪುರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಸಕ್ಸಸ್ ಪಾರ್ಟಿಯಲ್ಲಿ ಆರ್ಜಿವಿ ಹೀಗೆ ಮಾಡಿದ್ದಾರೆ.
ನಟಿಯರ ಮೇಲೆ ಶಾಂಪೇನ್ ಚೆಲ್ಲಿ ತಾನೂ ಸುರಿದುಕೊಂಡ ರಾಮ್ಗೋಪಾಲ್ ವರ್ಮಾ! - undefined
'ಇಸ್ಮಾರ್ಟ್ ಶಂಕರ್' ಸಕ್ಸಸ್ ಪಾರ್ಟಿಯಲ್ಲಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ ನಟಿಯರ ಮೇಲೆ ಶ್ಯಾಂಪೇನ್ ಚೆಲ್ಲಿ ನಂತರ ತಮ್ಮ ತಲೆ ಮೇಲೂ ಸುರಿದುಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ರಾಮ್ಪೋತಿನೇನಿ, ನಭಾ ನಟೇಶ್, ನಿಧಿ ಅಗರ್ವಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಇಸ್ಮಾರ್ಟ್ ಶಂಕರ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಬಾಕ್ಸ್ ಆಫೀಸಿನಲ್ಲಿ ಕೂಡಾ ಸಿನಿಮಾ ಭಾರೀ ಕಲೆಕ್ಷನ್ ಮಾಡುತ್ತಿದೆ. ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದು ನಟಿ ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ಜೊತೆ ಸೇರಿ ನಿರ್ಮಿಸಿದ್ದಾರೆ. ನಿನ್ನೆ ಚಿತ್ರತಂಡ ಸಿನಿಮಾದ ಸಕ್ಸಸ್ ಪಾರ್ಟಿ ಏರ್ಪಡಿಸಿತ್ತು. ಈ ವೇಳೆ ಚಿತ್ರತಂಡದ ಎಲ್ಲಾ ಸದಸ್ಯರು ಹಾಗೂ ಪುರಿ ಜಗನ್ನಾಥ್ ಸ್ನೇಹಿತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಕೂಡಾ ಹಾಜರಿದ್ದರು.
ಈ ವೇಳೆ ವರ್ಮಾ ಶಾಂಪೇನ್ ಹಿಡಿದು ಅದನ್ನು ಚಾರ್ಮಿ, ನಭಾ, ನಿಧಿ ಅಗರ್ವಾಲ್ ಮೇಲೆ ಚೆಲ್ಲಿ ನಂತರ ತಮ್ಮ ತಲೆ ಮೇಲೆ ಸುರಿದುಕೊಂಡಿದ್ದಾರೆ. ಈ ವಿಡಿಯೋವನ್ನು ಆರ್ಜಿವಿ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಸಿನಿಮಾ ನೋಡಿದ ಆರ್ಜಿವಿ ನಭಾ ನಟನಾ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ನಭಾ ನಟೇಶ್ ನೋಡಿದ ಮೇಲೆ ಆಕೆ ಇಲಿಯಾನ ವರ್ಷನ್ 2 ಎಂದು ಹೊಗಳಿದ್ದಾರೆ. ಅಲ್ಲದೆ, ಇನ್ನು ಮುಂದೆ ನಾನು ನಿಮ್ಮ ಅಭಿಮಾನಿ ಎಂದು ಕೂಡಾ ಹೇಳಿಕೊಂಡಿದ್ದಾರೆ.