ಕರ್ನಾಟಕ

karnataka

ETV Bharat / sitara

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಾಯಿ, ಹಿರಿಯ ನಟಿ ಪ್ರತಿಮಾದೇವಿ ಇನ್ನಿಲ್ಲ - ರಂಗಭೂಮಿ ಕಲಾವಿದೆ ಪ್ರತಿಮಾದೇವಿ

ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಹಾಗೂ ನಟಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ತಾಯಿ ಆಗಿರುವ ಪ್ರತಿಮಾದೇವಿ ಇಹಲೋಕ ತ್ಯಜಿಸಿದ್ದಾರೆ.

Director_Rajendra_Singh_Babu_Mother_Prathima_Devi_Nomore
ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಾಯಿ, ಹಿರಿಯ ನಟಿ ಪ್ರತಿಮಾದೇವಿ ಇನ್ನಿಲ್ಲ

By

Published : Apr 6, 2021, 7:47 PM IST

ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ರಂಗಭೂಮಿ ಕಲಾವಿದೆ ಪ್ರತಿಮಾದೇವಿ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕ, ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕ ಶಂಕರ್ ಸಿಂಗ್ ಪತ್ನಿ ಪ್ರತಿಮಾದೇವಿ ಅವರಿಗೆ 88 ವರ್ಷ ವಯಸ್ಸಾಗಿತ್ತು.

ಮಗಳು ವಿಜಯಲಕ್ಷ್ಮೀ ಸಿಂಗ್ ಅವರೊಂದಿಗೆ ಪ್ರತಿಮಾದೇವಿ

ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಹಾಗೂ ನಟಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ತಾಯಿ ಆಗಿರುವ ಪ್ರತಿಮಾದೇವಿ 1947ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು.

ಮಗಳು ವಿಜಯಲಕ್ಷ್ಮೀ ಸಿಂಗ್ ಅವರೊಂದಿಗೆ ಪ್ರತಿಮಾದೇವಿ

ಇದರ ಜೊತೆಗೆ ಮಹಾನಂದ, ನಾಗ ಕನ್ನಿಕ, ಶಿವ ಪಾರ್ವತಿ, ಜಗನ್ಮೋಹಿನಿ ಸಿನಿಮಾ‌ ಸೇರಿದಂತೆ ಬರೋಬ್ಬರಿ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಮಾದೇವಿ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜೈ ರಾಜ್ ಸಿಂಗ್ ಮೂರು ಜನ‌ ಗಂಡು ಮಕ್ಕಳು, ಹೆಣ್ಣು ಮಗಳಾದ ವಿಜಯಲಕ್ಷ್ಮಿ ಸಿಂಗ್ ಅವರನ್ನು ಅಗಲಿದ್ದಾರೆ.

ನಾಳೆ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ತೀರ್ಮಾನ ಮಾಡಿದೆ.

ABOUT THE AUTHOR

...view details