ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಚಂದನವನದ ನಿರ್ದೇಶಕನ ಮಗಳು ಉತ್ತಮ ಸಾಧನೆ ಮಾಡಿದ್ದಾಳೆ. ಶೇ. 92 ರಷ್ಟು ಅಂಕ ಗಳಿಸಿದ್ದಾಳೆ.
ಎಸ್ಎಸ್ಎಲ್ಸಿ ರಿಸಲ್ಟ್... ಮಗಳ ಸಾಧನೆಗೆ 'ಮಿಸ್ಸಿಂಗ್ ಬಾಯ್' ನಿರ್ದೇಶಕ ಖುಷ್ - ಟಾಪ್
ಕನ್ನಡದ ನಿರ್ದೇಶಕ ರಘುರಾಮ್ ಅವರ ಪುತ್ರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಶೇ.92 ರಷ್ಟು ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾಳೆ.
ಇಂದು ಪ್ರಕಟವಾಗಿರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಿರ್ದೇಶಕ ರಘುರಾಮ್ ಅವರ ಸುಪುತ್ರಿ ನನಸು, ಅಪ್ಪನ ಕನಸನ್ನು 'ನನಸು' ಮಾಡಿದ್ದಾಳೆ. ಈ ಸಂತಸದ ವಿಚಾರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಅವರು, 'ಸಮೀಕ್ಷೆ ಅನ್ನೋ ವಿದ್ಯಾರ್ಹತೆಯ SSLC ಪರೀಕ್ಷೆಯಲ್ಲಿ ನನ್ನ ಮಗಳು ನನಸು ಶೇಕಡಾ 92% ನಲ್ಲಿ ಉತ್ತೀರ್ಣ ಆಗಿದ್ದಾಳೆ. ಈ ಸಂತೋಷದ ಸಂಗತಿ ತಿಳಿಸಲು ಖುಷಿ ಮತ್ತು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.
ಇನ್ನು ಇತ್ತೀಚಿಗಷ್ಟೆ ತೆರೆಕಂಡ ನಿರ್ದೇಶಕ ರಘುರಾಮ್ ನಿರ್ದೇಶನದ 'ಮಿಸ್ಸಿಂಗ್ ಬಾಯ್' ಚಿತ್ರ ಗೆಲುವಿನ ನಗೆ ಬೀರಿತ್ತು. ಇದೀಗ ಮಗಳು ಕೂಡ ಉತ್ತಮ ಸಾಧನೆ ಮಾಡುವ ಮೂಲಕ ಅಪ್ಪನ ಖುಷಿಯನ್ನು ಇಮ್ಮಡಿಗೊಳಿಸಿದ್ದಾಳೆ.