ಕರ್ನಾಟಕ

karnataka

ETV Bharat / sitara

'ತೆರೆಮೇಲೆ ಒಬ್ಬ ನಟನನ್ನ ಹುಟ್ಹಾಕಿ ಅವ್ನಿಗ್ ಕೊಂಬು ಬರಬೇಕಾದ್ರೆ, ನಿರ್ದೇಶಕನ ಶ್ರಮ ಎಷ್ಟಿರುತ್ತೆ ನಿಮ್ಗೂ ಗೊತ್ತು..' - ನಿರ್ದೇಶಕ ಪ್ರೇಮ್ ಸುದ್ದಿ

ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಹಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಅಂತಾ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ..

Director Prem reaction to Actor Darshan
ಈ ಕುರಿತು ನಿರ್ದೇಶಕ ಪ್ರೇಮ್​ ಹೀಗೆ ಬರೆದುಕೊಂಡಿದ್ದಾರೆ

By

Published : Jul 17, 2021, 10:10 PM IST

Updated : Jul 17, 2021, 10:27 PM IST

ಬೆಂಗಳೂರು :ತಮ್ಮನ್ನು ಪುಡಂಗು ಎಂದಿರುವ ನಟ ದರ್ಶನ್ ವಿರುದ್ಧ ನಿರ್ದೇಶಕ ಜೋಗಿ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ತಮ್ಮ ಫಾರ್ಮ್​ಹೌಸ್ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದ್ದ ನಟ ದರ್ಶನ್, ನಿರ್ದೇಶಕ ಪ್ರೇಮ್ ಹೆಸರನ್ನು ಉಲ್ಲೇಖಿಸಿ "ಪ್ರೇಮ್ ದೊಡ್ಡ ಪುಡಂಗು, ಕೊಂಬು ಇದ್ಯಾ?" ಎಂದಿದ್ದರು. ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ನಿರ್ದೇಶಕ ಪ್ರೇಮ್​ ಹೀಗೆ ಬರೆದುಕೊಂಡಿದ್ದಾರೆ:

ದರ್ಶನ್ ಅವ್ರೇ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ಅವರು, ಅಂಬರೀಷ್ ಅವರು, ವಿಷ್ಣುವರ್ಧನ್‌ರವರು ಹಾಗೂ ರಜಿನಿಕಾಂತ್‌ರು ಒಬ್ಬ ಒಳ್ಳೆ ನಿರ್ದೇಶಕ ಎಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತಾ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ ಎಂದು ಬರೆದುಕೊಂಡಿದ್ದಾರೆ.

ನಾನು ನಂದೇ ಆದ್ ಸ್ಟೈಲ್‌ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್‌ನಲ್ಲಿ ಯಾವಾಗ ಚಿತ್ರ ಮಾಡ್ತೀರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು, ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್‌ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತಾ ಮತ್ತೆ ಚರ್ಚೆ ಮಾಡಿದ್ವಿ ಎಂದಿದ್ದಾರೆ.

ಆದರೆ, ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತಾ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತಾ ಡಿಸೈಡ್ ಮಾಡಿದ್ವಿ.. ಆದ್ರೆ, ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತಾ ಹೇಳಿದ್ದೆ.. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಸ್ ನೀಡಿ ರಾಬರ್ಟ್ ಸಿನಿಮಾಗೆ ಹಾರೈಸಿದವನು ನಾನು ಎಂದು ಹೇಳಿದ್ದಾರೆ.

ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ?. ದರ್ಶನ್ ಅವ್ರೇ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಹಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಅಂತಾ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು, ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ... Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ ಎಂದು ಪೋಸ್ಟ್​ ಮಾಡಿದ್ದಾರೆ.

ನಟಿ ರಕ್ಷಿತಾ ಅಸಮಾಧಾನ

ನಟಿ ರಕ್ಷಿತಾ ಅಸಮಾಧಾನ :ದರ್ಶನ್ ಪ್ರೇಮ್ ಹೆಸರು ಉಲ್ಲೇಖಿಸಿ ನೀಡಿದ ಹೇಳಿಕೆಗೆ ಪ್ರೇಮ್ ಪತ್ನಿ, ನಟಿ ರಕ್ಷಿತಾ ಸಹ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಕ್ಷಿತಾ ತಮ್ಮ ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Last Updated : Jul 17, 2021, 10:27 PM IST

ABOUT THE AUTHOR

...view details