ಕರ್ನಾಟಕ

karnataka

ETV Bharat / sitara

ಹುಟ್ಟುಹಬ್ಬದಂದು ಮನೆ ಬಳಿ ಬರಬೇಡಿ: ಅಭಿಮಾನಿಗಳಲ್ಲಿ ಮನವಿ ಮಾಡಿದ ಪ್ರೇಮ್​ - ನಿರ್ದೇಶಕ ಪ್ರೇಮ್ ಹುಟ್ಟುಹಬ್ಬದ ಸುದ್ದಿ

ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ದೇಶಕ ಪ್ರೇಮ್‌ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

Director prem
ನಿರ್ದೇಶಕ ಪ್ರೇಮ್​

By

Published : Oct 21, 2021, 8:35 PM IST

ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ನಿರ್ದೇಶಕ ಜೋಗಿ ಪ್ರೇಮ್​ ಅ.22ರಂದು ಶುಕ್ರವಾರ 44ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಪ್ರತಿವರ್ಷ ನನ್ನ ಹುಟ್ಟುಹಬ್ಬದ ದಿನ ಸ್ನೇಹಿತರು ಹಾಗೂ ಬಂಧು - ಬಳಗದವರು ಬಂದು ಶುಭ ಹಾರೈಸುತ್ತಿದ್ರಿ. ಆದರೆ, ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. ಯಾಕೆಂದರೆ ಮುಂಬೈನಲ್ಲಿ ಏಕ್​ ಲವ್​ ಯಾ ಸಿನಿಮಾ ಕೆಲಸ ನಡೆಯುತ್ತಿದೆ. ಹಾಗಾಗಿ ನಾನು ಮನೆಯಲ್ಲಿ ಇರುವುದಿಲ್ಲ. ಅದಕ್ಕೆ ಯಾರೂ ಕೂಡ ನನ್ನ ಮನೆ ಬಳಿ ಬರುವುದಾಗಲಿ, ಬಂದು ಕಾಯುವುದಾಗಲಿ ಮಾಡಬೇಡಿ, ಎಲ್ಲೇ ಇದ್ದರೂ ದೂರದಿಂದ ಆಶೀರ್ವಾದ ಮಾಡಿ ಎಂದು ಅಭಿಮಾನಿಗಳಲ್ಲಿ ಬಹಳ ಪ್ರೀತಿಯಿಂದ ಮನವಿ ಮಾಡಿಕೊಂಡಿದ್ದಾರೆ.

ನವೆಂಬರ್ 4ರ ದೀಪಾವಳಿ ಹಬ್ಬಕ್ಕೆ ತಾವು ನಿರ್ದೇಶನ ಮಾಡಿರುವ ಪತ್ನಿ ರಕ್ಷಿತಾ ಸಹೋದರ ರಾಣ ನಟನೆಯ ಏಕ್​ ಲವ್​ ಯಾ ಸಿನಿಮಾದ ಮೂರನೇ ಹಾಡು ರಿಲೀಸ್​ ಮಾಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಆಗಿರುವ 2 ಹಾಡುಗಳನ್ನು ದೊಡ್ಡ ಮಟ್ಟದಲ್ಲಿ ಹಿಟ್​​​ ಮಾಡಿಕೊಟ್ಟಿದ್ದೀರಿ. ಈಗ ಮೂರನೇ ಸಾಂಗ್​ ಬರುತ್ತಿದೆ. ಇದು ಲವ್​ ಬ್ರೇಕಪ್​ ಸಾಂಗ್ ಆಗಿದ್ದು, ವಿಶೇಷವಾಗಿ ಹುಡುಗಿಯರಿಗಾಗಿ ಮಾಡಲಾಗಿದೆ. ಆ ಹಾಡು ನೋಡಿ ಹಾರೈಸಿ ಎಂದು ಪ್ರೇಮ್ ಹೇಳಿದ್ದಾರೆ.

2022 ಜನವರಿ 21ಕ್ಕೆ ಏಕ್ ಲವ್ ಯಾ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಪ್ರೇಮ್​ ಚಿಂತನೆ ನಡೆಸಿದ್ದು, ಈ ಸಿನಿಮಾದ ಬಳಿಕ ಧ್ರುವ ಸರ್ಜಾ ಸಿನಿಮಾವನ್ನು ಪ್ರೇಮ್​ ಕೈ ಎತ್ತಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸಲಗ ಚಿತ್ರವನ್ನ ತುಳಿಯುವ ಹುನ್ನಾರ ನಡೆಯುತ್ತಿದೆ: ದುನಿಯಾ ವಿಜಯ್ ಆಕ್ರೋಶ

ABOUT THE AUTHOR

...view details