ಕರ್ನಾಟಕ

karnataka

By

Published : Sep 22, 2019, 9:38 AM IST

ETV Bharat / sitara

ದಯಾಳ್​​ ಪದ್ಮನಾಭನ್​ಗೆ ಧಮ್ಕಿ ಆರೋಪ: ಸೈಬರ್​​ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಿರ್ದೇಶಕ

66ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ನಾತಿಚರಾಮಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು. ಆದ್ರೆ ಇದರಲ್ಲಿ ಲಾಬಿ ನಡೆದಿದೆ ಎಂದು ನಿರ್ದೇಶಕ ಪದ್ಮನಾಭನ್​ ಹೈಕೋರ್ಟ್​​ ಮೆಟ್ಟಿಲೇರಿದ್ದರು. ಇದರಿಂದ ಲಿಂಗದೇವರು ನನಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಪದ್ಮನಾಭನ್​ ಸಿಸಿಬಿಗೆ ದೂರು ನೀಡಿದ್ದಾರೆ.

ನಿರ್ದೇಶಕ ದಯಾಳ್​​ ಪದ್ಮನಾಭನ್(ಮೈಕ್​​ ಹಿಡಿದವರು)

ನಿರ್ದೇಶಕ ಬಿ.ಎಸ್.​ ಲಿಂಗದೇವರು ತನಗೆ ಧಮ್ಕಿ ಹಾಕಿದ್ದಾರೆ ಎಂದು ನಿರ್ದೇಶಕ ಮತ್ತು ನಿರ್ಮಾಪಕ ದಯಾಳ್​ ಪದ್ಮನಾಭನ್ ಸೈಬರ್​ ಕ್ರೈಂ ಹಾಗೂ ಸಿಸಿಬಿಗೆ ದೂರು ನೀಡಿದ್ದಾರೆ.

66ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ನಾತಿಚರಾಮಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು. ಆದರೆ ನಾತಿಚರಾಮಿ ಚಿತ್ರಕ್ಕೆ ನೀಡಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಎಂದು ಪದ್ಮನಾಭನ್​ ಹೈಕೋರ್ಟ್​​ ಮೆಟ್ಟಿಲೇರಿದ್ದರು. ಯಾಕಂದ್ರೆ ಲಿಂಗದೇವರು ಅಕ್ಕ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರು. ಕಾನೂನು ಪ್ರಕಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧ ಹೊಂದಿರಬಾರದು.ಆದರೆ ಈ ವಿಷಯದಲ್ಲಿ ಲಿಂಗದೇವರು ನಕಲಿ ದಾಖಲೆಗಳನ್ನು ನೀಡಿ ರಾಷ್ಟ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾತಿಚರಾಮಿ ಚಿತ್ರದ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಪದ್ಮನಾಭನ್​​ ಹೈಕೋರ್ಟ್ ಮೆಟ್ಟಿಲೇರಿದ್ದರು.

ನಿರ್ದೇಶಕ ದಯಾಳ್​​ ಪದ್ಮನಾಭನ್​ಗೆ ಬಿ ಎಸ್​ ಲಿಂಗದೇವರು ಅವರಿಂದ ಧಮ್ಕಿ ಆರೋಪ

ಇನ್ನು, ಹೈಕೋರ್ಟ್ ಪದ್ಮನಾಭನ್ ಅರ್ಜಿಯನ್ನು ಪರಿಗಣಿಸಿ ರಾಷ್ಟ್ರ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಲಾಬಿ ನಡೆದಿದೆ ಎಂಬುದನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೆ. 11ರಂದು ಆದೇಶ ನೀಡಿತ್ತು. ಈ ಆದೇಶ ಬಂದ ನಂತರ ಸೆ. 17ರಂದು ರಾಷ್ಟ್ರಪ್ರಶಸ್ತಿ ಜೂರಿ ಮೆಂಬರ್ ಆಗಿರುವ ಲಿಂಗದೇವರು ಫೇಸ್​​ಬುಕ್​​​ನಲ್ಲಿ ಮೌನ ದೌರ್ಬಲ್ಯ ಅಲ್ಲ, ಮುಂದೈತಿ ಆ ಕರಾಳ ರಾತ್ರಿ ಮತ್ತು ದಿನ ಎಂದು ನನಗೆ ಧಮ್ಕಿ ಹಾಕಿದ್ದರು. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ನಾನು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ನಿರ್ದೇಶಕ ಪದ್ಮನಾಭನ್ ಹೇಳಿದ್ದಾರೆ.

ABOUT THE AUTHOR

...view details