ಆಪ್ತ ಮಿತ್ರ, ಆಪ್ತ ರಕ್ಷಕ, ಆರಕ್ಷಕ, "ಆಯುಷ್ಮಾನ್ ಭವ" ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಪಿ.ವಾಸು, ನಟಿ ರಚಿತಾ ರಾಮ್ ಮಾತಿಂದ ಬೇಸರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಮೊನ್ನೆ ನಡೆದ ‘ಆಯುಷ್ಮಾನ್ ಭವ’ ಮಾಧ್ಯಮಗೋಷ್ಠಿಯಲ್ಲಿ ನಿರ್ದೇಶಕ ಪಿ.ವಾಸು ಅನುಪಸ್ಥಿತಿಯಲ್ಲಿ ನಟಿ ರಚಿತಾ ರಾಮ್ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಈ ಚಿತ್ರದಿಂದ ಒಳ್ಳೆಯದು, ಕೆಟ್ಟದ್ದು ಏನಾದರೂ ಆದರೆ ಅದಕ್ಕೆ ನಿರ್ದೇಶಕರೇ ಕಾರಣ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಪಿ.ವಾಸು ಮಲೇಷ್ಯಾ ಪ್ರವಾಸದಲ್ಲಿದ್ದರು. ರಚಿತಾರ ಹೇಳಿಕೆಯನ್ನು ವಿಡಿಯೋ ಮೂಲಕ ನೋಡಿರುವ ನಿರ್ದೇಶಕ ವಾಸು, ಬೇಸರ ವ್ಯಕ್ತಪಡಿಸಿದ್ದಾರಂತೆ.