ಡಿಜಿಟಲ್ ಪ್ರಿಂಟಿಂಗ್ನಲ್ಲಿ ಸಾಕಷ್ಟು ಹೆಸರು ಮಾಡಿರುವ ಪ್ರಿಂಟಿಂಗ್ ಜೋನ್ ಎರಡನೇ ಶಾಖೆಯನ್ನು ಇಂದು ಜಯನಗರದ 5ನೇ ಬ್ಲಾಕ್ನಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು. ಮೇಷ್ಟ್ರು ಜೊತೆ ಸಾಹಿತಿ ಜಿ.ವಿ.ಅಯ್ಯರ್ ಮೊಮ್ಮಗಳು, 'ಟ್ರಂಕ್' ಸಿನಿಮಾ ನಿರ್ದೇಶಕಿ ರಿಷಿಕ ಶರ್ಮ ಹಾಗೂ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ಶೈನಿ ಶೆಟ್ಟಿ ಭಾಗವಹಿಸಿದ್ದರು.
ಡಿಜಿಟಲ್ ಪ್ರಿಂಟಿಂಗ್ ಜೋನ್ ಉದ್ಘಾಟಿಸಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ - ಜರ್ಮನ್ ಟೆಕ್ನಾಲಜಿ
ಬೆಂಗಳೂರಿನಲ್ಲಿ ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ಉದ್ಘಾಟಿಸಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಯುವಕರು ಸರ್ಕಾರಿ ಕೆಲಸವನ್ನು ನಂಬಿ ಕೂರದೆ ಇಂತಹ ಉದ್ಯಮ ಆರಂಭಿಸಿದರೆ ತಾವೂ ಬೆಳೆದು ಇತರರಿಗೂ ಕೆಲಸ ನೀಡಿದಂತೆ ಆಗುತ್ತದೆ ಎಂದರು.
ಸುಮಾರು ಎಂಟು ವರ್ಷಗಳಿಂದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾಗಳಿಗೆ ಕೆಲಸ ಮಾಡುತ್ತಿರುವ ರಾಘು ಈ ಪ್ರಿಂಟ್ ಜೋನ್ ಶಾಖೆಯನ್ನು ಆರಂಭಿಸಿದ್ದಾರೆ. ಈ ಪ್ರಿಂಟ್ ಜೋನ್ನಲ್ಲಿ ಜರ್ಮನ್ ಟೆಕ್ನಾಲಜಿಯನ್ನು ಅಳವಡಿಸಿಕೊಂಡಿದ್ದು, ದೊಡ್ಡ ಫೋಟೋ ಕಾಪಿಗಳನ್ನು ಕೇವಲ 15-20 ನಿಮಿಷದಲ್ಲಿ ಪ್ರಿಂಟ್ ಮಾಡುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ವಿಸಿಟಿಂಗ್ ಕಾರ್ಡ್ಗಳನ್ನು ಮುಂಚೆ ಪ್ರಿಂಟ್ ಮಾಡಲು ಗಂಟೆಗಟ್ಟಲೆ ಟೈಮ್ ವೇಸ್ಟ್ ಆಗುತ್ತಿತ್ತು. ಆದರೆ ಈ ತಂತ್ರಜ್ಞಾನದಿಂದ ಕೇವಲ 5 ನಿಮಿಷಗಳಲ್ಲಿ ನಾವು ವಿಸಿಟಿಂಗ್ ಕಾರ್ಡುಗಳನ್ನು ಪ್ರಿಂಟ್ ಬಹುದಾಗಿದೆ ಎಂದು ರಾಘು ಹೇಳಿದರು.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರ ಬ್ಯಾನರ್ಗಳನ್ನು ನಿಷೇಧಿಸಿರುವುದರಿಂದ ಡಿಜಿಟಲ್ ಪ್ರಿಂಟರ್ಗಳಿಗೆ ಬೇಡಿಕೆ ಇದ್ದು, ಪ್ರಿಂಟ್ ಜೋನ್ ಆರಂಭವಾಗಿರುವುದು ಇಂಡಸ್ಟ್ರಿಗೆ ಒಂದು ರೀತಿಯಲ್ಲಿ ತುಂಬಾ ಸಹಾಯ ಆಗಿದೆ. ಜೊತೆಗೆ ಯುವಕರು ಸರ್ಕಾರಿ ಕೆಲಸವನ್ನೇ ನಂಬಿಕೊಂಡು ಕೂರುವ ಬದಲು ಇಂತಹ ಉದ್ಯಮಕ್ಕೆ ಕೈಹಾಕಿ ಅವರೂ ಬೆಳೆದು ಒಂದಷ್ಟು ಜನರಿಗೆ ಉದ್ಯೋಗ ಕೊಟ್ಟರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.