ಐದು ಸಿನಿಮಾಗಳ ನಿರ್ದೇಶಕ ಮಂಜು ಸ್ವರಾಜ್ (ಶಿಶಿರ, ಶ್ರಾವಣಿ ಸುಬ್ರಮಣ್ಯ, ಶ್ರೀಕಂಠ, ಪಟಾಕಿ, ಮನೆ ಮಾರಾಟ್ಟಕ್ಕಿದೆ) ತಮ್ಮ ಆರನೇ ಸಿನಿಮಾ ‘6 ದಿ ಕೂಟ'ದಿಂದ ಹೊರಬಂದಿದ್ದಾರೆ.
ಸೆಟ್ಟೇರಿದ ಸಿನಿಮಾ ಶುರುವಾಗಲಿಲ್ಲ... ‘6 ದಿ ಕೂಟ'ದಿಂದ ಆಚೆ ಬಂದ ನಿರ್ದೇಶಕ ಮಂಜು ಸ್ವರಾಜ್ - undefined
ಕೆಲವು ಸಿನಿಮಾಗಳು ಭರ್ಜರಿ ಆಗಿ ಸೆಟ್ಟೇರಿ, ಕೆಲವು ದಿವಸ ಚಿತ್ರೀಕರಣ ಮಾಡಿ ಸ್ಥಗಿತಗೊಳ್ಳುತ್ತವೆ. ಇಂತಹ ಚಿತ್ರಗಳ ಸಾಲಿಗೆ ಇದೀಗ ‘6 ದಿ ಕೂಟ' ಸೇರಿಕೊಂಡಿದೆ.
2018 ಡಿಸೆಂಬರ್ 5ರಂದು ನಿರ್ಮಾಪಕ ರಾಜೇಶ್ ಅವರ ಪುತ್ರ ಅನುರಾಗ್ ಮತ್ತು ಐದು ಸ್ನೇಹಿತರನ್ನು ಪರಿಚಯ ಮಾಡಲು ಮುಹೂರ್ತ ಮಾಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ನಿರ್ಮಾಪಕರು ಪೊಲೀಸ್ ಪ್ರಕರಣದಲ್ಲಿ ಸಿಕ್ಕಿಕೊಂಡಿರುವುದರಿಂದ ಆ ಸಿನಿಮಾ ಆರಂಭ ಸಾಧ್ಯವಾಗಲಿಲ್ಲ. ಇದರಿಂದ ನಿರ್ದೇಶಕ ಮಂಜು ಸ್ವರಾಜ್ ಆ ಚಿತ್ರದಿಂದ ಕಳಚಿಕೊಂಡು ಮುಂದೆ ಸಾಗಿದ್ದಾರೆ.
ಈ ನಿರ್ದೇಶಕ ಆರು ಹುಡುಗರುಗಳಿಗೆ ತರಬೇತಿ ನೀಡಿ ಕ್ಯಾಮರಾ ಮುಂದೆ ತರುವುದಾಗಿ ಹೇಳಿದ್ದರು. ಇದೊಂದು ಪ್ರಯೋಗಿಕ ಕಮರ್ಷಿಯಲ್ ಸಿನಿಮಾ ಅಂತ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಹೇಳಿಕೊಂಡಿದ್ದರು. ಅಭಿಮನ್ ರಾಯ್ ಸಂಗೀತಕ್ಕೆ ಅಣಿಯಾಗುತ್ತಿದ್ದರು. ಆದರೆ, ಅಷ್ಟರಲ್ಲಿಯೇ ನಿರ್ಮಾಪಕ ರಾಜೇಶ್ ಅವರ ಪೊಲೀಸ್ ಪ್ರಕರಣ ಎಲ್ಲವನ್ನೂ ಸ್ಥಗಿತ ಆಗುವಂತೆ ಮಾಡಿತು.