ಕಣ್ಣೀರಿನ ನಿರ್ದೇಶಕ ಎಂದು ಹೆಸರು ಪಡೆದಿರುವ ಮಹೇಂದರ್ ತಮ್ಮ ಸಂಸಾರಿಕ ಜೀವನದಲ್ಲಾದ ಏಳುಬೀಳುಗಳಿಂದ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ರು. ಇವರು ನಿರ್ದೇಶನ ಮಾಡಿದ ಒನ್ಸ್ ಮೋರ್ ಕೌರವ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಯಶಸ್ಸು ತರಲಿಲ್ಲ. ಇದಾದ ಮೇಲೆ ಮಹೇಂದರ್ ಎಲ್ಲಿಗೆ ಹೋದ್ರು ಎಂಬ ಬಗ್ಗೆ ಚರ್ಚೆ ಕೂಡ ಶುರುವಾಗಿತ್ತು. ಆದ್ರೆ ಇದೀಗ ಇದಕ್ಕೆಲ್ಲ ಉತ್ತರ ಕೊಡೋಕೆ ನಿರ್ದೇಶಕ ಮಹೇಂದರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಚಂದನವನಕ್ಕೆ ರೀ ಎಂಟ್ರಿ ಕೊಟ್ಟ ನಿರ್ದೇಶಕ ಮಹೇಂದರ್... ನಾಯಕನಾಗಿ ನಟನೆ! - ನಿರ್ದೇಶಕ ಮಹೇಂದರ್
ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಿರ್ದೇಶಕ ಮಹೇಂದರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಂದನವನಕ್ಕೆ ರೀ ಎಂಟ್ರಿ ಕೊಟ್ಟ ನಿರ್ದೇಶಕ ಮಹೇಂದರ್
ಇದೀಗ ʻಶಬ್ದʼ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೋಡಿಯಾಗಿ ಸೋನುಗೌಡ ಕಾಣಿಸಿಕೊಳ್ಳಲಿದ್ದಾರೆ. ʻಶಬ್ದʼ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸೋನುಗೌಡ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಮಹೇಂದರ್ 2001ರಲ್ಲಿ ರಿಲೀಸ್ ಆಗಿದ್ದ ಗಟ್ಟಿಮೇಳ ಸಿನಿಮಾದಲ್ಲಿ ನಾಯಕನಾಗಿ ಯಶಸ್ಸು ಕಂಡಿದ್ದರು. ಆ ನಂತರದಲ್ಲಿ ಯಾವುದೇ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಳ್ಳಲಿಲ್ಲ.
Last Updated : Dec 16, 2019, 3:59 PM IST