ಕರ್ನಾಟಕ

karnataka

ETV Bharat / sitara

'ಮಕ್ಕಳ ತಂಟೆಗೆ ಬಂದ್ರೆ ಹುಷಾರ್' ಅಂತಿದ್ದಾರೆ ನಿರ್ದೇಶಕ ಕೋಡ್ಲು ರಾಮಕೃಷ್ಣ!

ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಕೇವಲ ನಲವತ್ತು ದಿನಗಳಲ್ಲೇ ಚಿತ್ರದ ಸೆನ್ಸಾರ್ ಸಹ ಪೂರ್ಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಹ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ಸಂಕ್ರಾಂತಿ ವೇಳೆಗೆ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ..

Director Kodlu Ramakrishna New Cinema is makkala thantege bandhre hushar
ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಕ್ಕಳ ತಂಟೆಗೆ ಬಂದ್ರೆ ಹುಷಾರ್' ಸಿನಿಮಾ

By

Published : Jan 11, 2021, 7:20 PM IST

ಕನ್ನಡ ಚಿತ್ರರಂಗದಲ್ಲಿ ಉದ್ಭವ, ಯಾರಿಗೂ ಹೇಳಬೇಡಿ ಹಾಗೂ ಕಾವ್ಯ ಹೀಗೆ ಸಾಕಷ್ಟು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಕೋಡ್ಲು ರಾಮಕೃಷ್ಣ ಇದೀಗ 'ಮಕ್ಕಳ ತಂಟೆಗೆ ಬಂದ್ರೆ ಹುಷಾರ್' ಅಂತಿದ್ದಾರೆ.

ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಕ್ಕಳ ತಂಟೆಗೆ ಬಂದ್ರೆ ಹುಷಾರ್' ಸಿನಿಮಾ

ಇದು ಕೋಡ್ಲು ರಾಮಕೃಷ್ಣ ಅವರ ಮಕ್ಕಳ ಹೊಸ ಸಿನಿಮಾದ ಹೆಸರು. ಮಕ್ಕಳ ನಿತ್ಯ ಚಟುವಟಿಕೆ, ಪೋಷಕರ ಜೀವನ ಶೈಲಿ, ಮೊಬೈಲ್ ಗೀಳು ಹಾಗೂ ಶ್ರೀಮಂತ, ಮಧ್ಯಮ ಹಾಗೂ ಬಡವರ ಮನೆ ಮಕ್ಕಳು ಕೊರೊನಾ ಬರುವ ಮೊದಲು ಹಾಗೂ ನಂತರ ಹೇಗಿದ್ದಾರೆ? ಎಂಬುವುದೇ ಈ ಚಿತ್ರದ ಕಥಾ ಸಾರಾಂಶ.

ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಕ್ಕಳ ತಂಟೆಗೆ ಬಂದ್ರೆ ಹುಷಾರ್' ಸಿನಿಮಾ

‌ಕ್ರಿಶ್ ಜೋಶಿ ಅವರ ಕಥೆಗೆ ಕೋಡ್ಲು ರಾಮಕೃಷ್ಣ ಹಾಗೂ ರಾಮಮೂರ್ತಿ ಚಿತ್ರಕಥೆ ರಚಿಸಿದ್ದಾರೆ. ಕ್ರಿಶ್ ಜೋಶಿ ಹಾಗೂ ಕೋಡ್ಲು ರಾಮಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಮಿತ್ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ದು, ನಾಗೇಂದ್ರ ಛಾಯಾಗ್ರಹಣ ಹಾಗೂ ವಸಂತ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಕ್ಕಳ ತಂಟೆಗೆ ಬಂದ್ರೆ ಹುಷಾರ್' ಸಿನಿಮಾ

ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಕೇವಲ ನಲವತ್ತು ದಿನಗಳಲ್ಲೇ ಚಿತ್ರದ ಸೆನ್ಸಾರ್ ಸಹ ಪೂರ್ಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಹ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ಸಂಕ್ರಾಂತಿ ವೇಳೆಗೆ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಕ್ಕಳ ತಂಟೆಗೆ ಬಂದ್ರೆ ಹುಷಾರ್' ಸಿನಿಮಾ

ಓದಿ:ಕನ್ನಡದ ಕೋಟ್ಯಾಧಿಪತಿ ಸ್ಪರ್ಧಿಗೆ ಬಹುಮಾನ ತಲುಪಿದ ದಾಖಲೆ ನೀಡಿದ ಖಾಸಗಿ ವಾಹಿನಿ

ಈ ಚಿತ್ರದಲ್ಲಿ ಬೇಬಿ ಗಗನ, ಬೇಬಿ ಯಶಿಕಾ, ಬೇಬಿಶ್ರೀ, ಬೇಬಿ ಪ್ರತಿಷ್ಠ ದೇಶಪಾಂಡೆ, ಯುಕ್ತ ಹೆಗಡೆ, ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಕಾಶ್, ಶಿವಧ್ವಜ್, ಪ್ರಥಮ ಪ್ರಕಾಶ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಕುಮಾರಿ ಐಶ್ವರ್ಯ, ಶ್ರೀಧರ್ ನಾಯಕ್, ಸ್ನೇಹ ಭಟ್, ಪ್ರಕಾಶ್, ಭವಾನಿ ಪ್ರಕಾಶ್, ಮಾಸ್ಟರ್ ವಿಷ್ಣು ಸಂಜಯ್, ಮಾಸ್ಟರ್ ತರುಣ್, ಮಾಸ್ಟರ್ ಸರ್ವಜ್ಞ, ಮಾಸ್ಟರ್ ಯುವರಾಜ್ ಮುಂತಾದವರು ನಟಿಸಿದ್ದಾರೆ.

ABOUT THE AUTHOR

...view details