ಕರ್ನಾಟಕ

karnataka

ETV Bharat / sitara

ಗೋಧಿ ಬಣ್ಣ...ಕವಲುದಾರಿ ನಿರ್ದೇಶಕನಿಂದ 2020ಕ್ಕೆ ಮತ್ತೊಂದು ಸಿನಿಮಾ - ಪಿ ಆರ್ ಕೆ ಬ್ಯಾನರ್​

ತಮ್ಮ ಮುಂದಿನ ಸಿನಿಮಾಕ್ಕೆ ಕಥೆ ಬರೆಯಲು ಶುರು ಮಾಡಿರುವ ಹೇಮಂತ್​ ರಾವ್​ ದಿನದ ಬಹುತೇಕ ಸಮಯವನ್ನು ಕಥೆಗಾಗಿಯೇ ಮೀಸಲಿಟ್ಟಿದ್ದಾರೆ. ಈಗತಾನೇ ಕಥೆ ಚಿಗುರೊಡೆಯುತ್ತಿದೆ. ಬಹುಶಃ 2020 ಕ್ಕೆ ನನ್ನ ಮೂರನೇ ಸಿನಿಮಾ ಸೆಟ್ಟೇರುವು ಸಾಧ್ಯತೆ ಇದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

ಹೇಮಂತ್​ ರಾವ್

By

Published : Oct 2, 2019, 10:01 AM IST

2016ರಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಜನಪ್ರಿಯತೆ ಪಡೆದುಕೊಂಡ ಮೇಲೆ ‘ಕವಲುದಾರಿ’ ಯಿಂದ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡವರು ಹೇಮಂತ್ ರಾವ್ ಸಾಫ್ಟ್​ವೇರ್​ ಉದ್ಯೋಗ ಪಕ್ಕಕ್ಕಿಟ್ಟು ಸಂಪೂರ್ಣವಾಗಿ ಸಿನಿಮಾ ಕಡೆ ವಾಲಿಕೊಂಡಿದ್ದಾರೆ.

ಕವಲುದಾರಿ ಪಿ ಆರ್ ಕೆ ಬ್ಯಾನರ್​ನಲ್ಲಿ ತಯಾರಾದ ಸಿನಿಮಾ. ಈ ಸಿನಿಮಾ ಸುಮಾರು 8 ಕೋಟಿ ವರೆಗೂ ಸಂಪಾದಿಸಿತು. ಬಿಡುಗಡೆಗೂ ಮುಂಚೆಯೇ ಹಿಂದಿ ಭಾಷೆಯ ರೀಮೇಕ್ ರೈಟ್ಸ್ ಸುಮಾರು 13 ಲಕ್ಷಕ್ಕೆ ಮಾರಾಟವಾಯಿತು. ಈ ಚಿತ್ರದ ಧ್ವನಿ ಸುರಳಿ ಸಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಬ್ಯಾನರ್​ನಲ್ಲಿ ಬಿಡುಗಡೆಯಾಯಿತು. ಕಳೆದ ತಿಂಗಳು ಕವಲುದಾರಿ ಸಿನಿಮಾ ಕಿರು ತೆರೆಯಲ್ಲೂ ಸಹ ಬಿಡುಗಡೆ ಆಯಿತು.

ಸದ್ಯಕ್ಕೆ ನಿರ್ದೇಶಕ ಹೇಮಂತ್ ರಾವ್ ತೆಳ್ಳಗಾಗಿದ್ದು, ತೂಕ ಇಳಿಸಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾಕ್ಕೆ ಕಥೆ ಬರೆಯಲು ಶುರು ಮಾಡಿರುವ ಹೇಮಂತ್​ ರಾವ್​ ದಿನದ ಬಹುತೇಕ ಸಮಯವನ್ನು ಕಥೆಗಾಗಿಯೇ ಮೀಸಲಿಟ್ಟಿದ್ದಾರೆ, ಈಗತಾನೇ ಕಥೆ ಚಿಗುರೊಡೆಯುತ್ತಿದೆ. ಬಹುಶಃ 2020 ಕ್ಕೆ ನನ್ನ ಮೂರನೇ ಸಿನಿಮಾ ಸೆಟ್ಟೇರುವು ಸಾಧ್ಯತೆ ಇದೆ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

‘ಗೋಧಿ ಬಣ್ಣ..ಕವಲುದಾರಿ ಎರಡು ವಿಭಿನ್ನ ಶೈಲಿಯ ಸಿನಿಮಾಗಳಾಗಿದ್ದು, ಈಗ ಹೇಮಂತ್ ರಾವ್ ಮೂರನೇ ಸಿನಿಮಾ ಸಹ ಹೊಸ ದಾಟಿಯಲ್ಲೇ ಕಥಾ ವಸ್ತು ಸಿದ್ದವಾಗುತ್ತಿದೆ.

ABOUT THE AUTHOR

...view details