ಮಠ, ಎದ್ದೇಳು ಮಂಜುನಾಥ್, ಎರಡನೇ ಸಲ. ಹೀಗೆ ವಿಭಿನ್ನ ಸಿನಿಮಾಗಳ ಮಾಡಿ ಗಮನ ಸೆಳೆದಿರೋ ನಿರ್ದೇಶಕ ಗುರು ಪ್ರಸಾದ್ಗೆ ಸಹ ಕೊರೊನಾ ದೃಢವಾಗಿದೆ. ಈ ಬಗ್ಗೆ ನಿರ್ದೇಶಕ ಗುರು ಪ್ರಸಾದ್ ಸೋಷಿಯಲ್ ಮೀಡಿಯಾ ಮೂಲಕ ದೃಢಪಡಿಸಿದ್ದಾರೆ. ಅಷ್ಟೇ ಅಲ್ಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಬಿ.ವೈ. ವಿಜಯೇಂದ್ರ, ಆರೋಗ್ಯ ಸಚಿವ ಸುಧಾಕರ್, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಒಂದು ವೇಳೆ ನಾನು ನಿಧನರಾದರೆ ಅದಕ್ಕೆ ಯಡಿಯೂರಪ್ಪ, ವಿಜಯೇಂದ್ರ, ಸುಧಾಕರ್ ಮುಂತಾದ ರಾಜಕಾರಣಿಗಳೇ ಕಾರಣ ಎಂದು ಗುರು ಪ್ರಸಾದ್ ಹೇಳಿದ್ದಾರೆ.
ಇದು ನನ್ನ ಕೊನೆ ಕ್ಷಣಗಳ ಕೊನೇ ಮಾತುಗಳು. ಕೊರೊನಾ ಪಾಸಿಟಿವ್ ಬಂದಿದೆ. ನಮ್ಮ ಮನೆಯವರೆಗೂ ಕೊರೊನಾ ತಂದುಕೊಟ್ಟಂತಹ ಯಡಿಯೂರಪ್ಪ, ವಿಜಯೇಂದ್ರ ಇವರಿಗೆಲ್ಲ ಧನ್ಯವಾದಗಳು. ನಮ್ಮ ಸಾವಿಗೆ ಮುನ್ನುಡಿ ಬರೆದಿದ್ದೀರಿ. ಕೊರೊನಾ ಪಾಸಿಟಿವ್ ಆಗಿದ್ದಕ್ಕೆ ನೋವಿನಲ್ಲಿ ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ನಾನು ಸತ್ತರೂ ಕೂಡ ಕೊನೇ ಕ್ಷಣದವರೆಗೂ ನನ್ನ ಈ ಶಾಪ ನೋವು ಕೊಡಬೇಕು ಎಂದು ಈ ಮಾತು ಹೇಳುತ್ತಿದ್ದೇನೆ. ಒಂದೂವರೆ ವರ್ಷ ಟೈಮ್ ತಗೊಂಡು, ಮೂರು - ನಾಲ್ಕು ತಿಂಗಳು ಲಾಕ್ಡೌನ್ ಮಾಡಿದ್ರಲ್ಲ ಎನ್ನುವ ಮೂಲಕ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಇನ್ನು ನರೇಂದ್ರ ಮೋದಿ ಪ್ರಾಮಾಣಿಕ. ಆದರೆ, ಬಿಜಿಪಿಯವರೆಲ್ಲ ಪ್ರಾಮಾಣಿಕರಲ್ಲ. ಒಂದೊಂದು ರೂಪಾಯಿ ದುಡಿಯಲು ಎಲ್ಲರೂ ಕಷ್ಟ ಪಡುತ್ತಿದ್ದಾರೆ. ಒಂದೂವರೆ ವರ್ಷ ಸಮಯ ತೆಗೆದುಕೊಂಡು ಪ್ರತಿಮನೆಗೂ ವೈರಸ್ ಕಳಿಸಿದ್ದೀರಲ್ಲ. ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಕೊರೊನಾ ಬಂದಿದೆ. ಅಕಸ್ಮಾತ್ ಸತ್ತು ಹೋದರೆ ಇದನ್ನೆಲ್ಲ ಹೇಳೋಕೆ ಆಗಲ್ಲ ಅಂತಾ ವಿಡಿಯೋವನ್ನ ಮಾಡಿದ್ದೀನಿ ಅಂತಾ ನಿರ್ದೇಶಕ ಗುರು ಪ್ರಸಾದ್ ತಮ್ಮ ನೋವು ತೋಡಿಕೊಂಡಿದ್ದಾರೆ.