ಎರಡು ಯಶಸ್ವಿ ಸಿನಿಮಾಗಳ ನಂತರ ಮಠ ಗುರುಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗುತ್ತಿದ್ದಾರೆ. ಇವರಿಬ್ಬರ ಮೊದಲ ಸಿನಿಮಾ 'ಮಠ' (2006) ಹಲವಾರು ವಿವಾದಗಳನ್ನು ಸೃಷ್ಟಿ ಮಾಡಿತ್ತು. ನಂತರ ‘ಎದ್ದೇಳು ಮಂಜುನಾಥ’ (2009) ನಾನೇನು ಕಡಿಮೆ ಎಂದು ಸ್ವಲ್ಪ ಸದ್ದು ಮಾಡಿತ್ತು.
ಮತ್ತೆ ಒಂದಾಗುತ್ತಿದ್ದಾರೆ ಮಠ ಗುರುಪ್ರಸಾದ್, ನವರಸನಾಯಕ ಜಗ್ಗೇಶ್ - ನಿರ್ದೇಶಕ ವಿಜಯ್ಪ್ರಸಾದ್
'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಗುರು ಪ್ರಸಾದ್ ಇದೀಗ ಜಗ್ಗೇಶ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಜೋಡಿ ಮೂರನೇ ಬಾರಿ ಒಂದಾಗುತ್ತಿದ್ದು ಖಂಡಿತ ಈ ಬಾರಿ ಕೂಡಾ ವೀಕ್ಷಕರನ್ನು ಮೋಡಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಜಗ್ಗೇಶ್ ಹಾಗೂ ಗುರುಪ್ರಸಾದ್ ನಡುವೆ ಮನಸ್ತಾಪ ಇದೆ ಎಂಬ ಸಹ ಗಾಳಿಸುದ್ದಿ ಹರಡಿತ್ತು. ಮಠ ಗುರುಪ್ರಸಾದ್ ‘ಎರಡನೇ ಸಲ’ ಸಿನಿಮಾ ನಂತರ ಕೂಡಾ ಸ್ವಲ್ಪ ವಿವಾದ ಕಟ್ಟಿಕೊಂಡಿದ್ದರು. ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ. ಈ ಬಗ್ಗೆ ಗುರುಪ್ರಸಾದ್ ಟ್ವೀಟ್ ಕೂಡಾ ಮಾಡಿದ್ದರು. ಇವರ ಟ್ವೀಟ್ಗೆ ಜಗ್ಗೇಶ್ ಕೂಡಾ ಸ್ಪಂದಿಸಿದ್ದಾರೆ. 10 ವರ್ಷಗಳ ನಂತರ ನಾವಿಬ್ಬರೂ ಮತ್ತೆ ಜೊತೆ ಸೇರಿ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ಜಗ್ಗೇಶ್. ಮಜ್ಜಿಗೆಯಲ್ಲಿನ ಬೆಣ್ಣೆಯನ್ನು ಕಡೆಯುವಂತೆ ಕಥೆ ಸಿದ್ಧ ಮಾಡಲು ಗುರುಪ್ರಸಾದ್ ತೊಡಗಿದ್ದಾರೆ ಎಂದೂ ಕೂಡಾ ಜಗ್ಗೇಶ್ ಹೇಳಿಕೊಂಡಿದ್ದಾರೆ. ಈ ಜೋಡಿ ಮೂರನೇ ಬಾರಿ ಮೋಡಿ ಮಾಡುವುದು ಖಂಡಿತ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಜಗ್ಗೇಶ್ ವೃತ್ತಿ ಜೀವನದಲ್ಲಿ ಗುರು ಪ್ರಸಾದ್ ರೀತಿಯೇ ಕೆಲವೊಂದು ದ್ವಂಧ್ವ ಸಂಭಾಷಣೆಯುಳ್ಳ ಸಿನಿಮಾವನ್ನು ನಿರ್ದೇಶಕ ವಿಜಯ್ಪ್ರಸಾದ್ ನಿರ್ದೇಶಿಸಿದ್ದರು. ಈ 'ನೀರ್ದೋಸೆ' ಯಶಸ್ಸಿನ ನಂತರ ಈಗ 'ತೋತಾಪುರಿ' ಕೂಡಾ ಸಿದ್ಧವಾಗಿದೆ.