ಕರ್ನಾಟಕ

karnataka

ETV Bharat / sitara

ಅಣ್ಣಾವ್ರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಚಿತ್ರದ ಹೆಸರು ಬದಲಿಸಲು ಒಪ್ಪಿದ ದಿನೇಶ್ ಬಾಬು - Rachita ram starring Horror film

ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50 ನೇ ಚಿತ್ರ 'ಕಸ್ತೂರಿ ನಿವಾಸ' ಮುಹೂರ್ತ ನಿನ್ನೆಯಷ್ಟೇ ಜರುಗಿತ್ತು. ಆದರೆ ಈ ಚಿತ್ರದ ಶೀರ್ಷಿಕೆಗೆ ಅಭಿಮಾನಿಗಳ ವಿರೋಧವಿದ್ದು ಅಣ್ಣಾವ್ರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ದಿನೇಶ್ ಬಾಬು ಚಿತ್ರದ ಟೈಟಲ್ ಬದಲಿಸಲು ಒಪ್ಪಿದ್ದಾರೆ ಎನ್ನಲಾಗಿದೆ.

Dinesh babu changed movie name
ದಿನೇಶ್ ಬಾಬು

By

Published : Aug 29, 2020, 5:54 PM IST

ನಿನ್ನೆಯಷ್ಟೇ ಹಿರಿಯ ನಿರ್ದೇಶಕ ದಿನೇಶ್ ಬಾಬು ತಮ್ಮ 50 ನೇ ಚಿತ್ರ 'ಕಸ್ತೂರಿ ನಿವಾಸ'ದ ಮುಹೂರ್ತ ನೆರವೇರಿಸಿದ್ದರು. ಚಿತ್ರದಲ್ಲಿ ರಚಿತಾ ರಾಮ್​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ರಚಿತಾ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದಿನೇಶ್ ಬಾಬು 50 ನೇ ಚಿತ್ರದ ಮುಹೂರ್ತ

ಇನ್ನು ಡಾ. ರಾಜ್​ಕುಮಾರ್ ಅಭಿನಯದ ಯಾವುದೇ ಸಿನಿಮಾಗಳ ಹೆಸರನ್ನು ಮರುಬಳಕೆ ಮಾಡುವುಂತಿಲ್ಲ ಎಂದು ಕನ್ನಡ ಚಿತ್ರರಂಗ ಹೇಳಿದ್ದರೂ ದಿನೇಶ್ ಬಾಬು ಮಾತ್ರ 1971 ರಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದ ಕೆಸಿಎನ್ ಗೌಡ ಅವರ ಪುತ್ರ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಒಪ್ಪಿಗೆ ಪಡೆದು ಚಿತ್ರಕ್ಕೆ 'ಕಸ್ತೂರಿ ನಿವಾಸ' ಎಂದು ಹೆಸರಿಟ್ಟಿದ್ದರು. ಆದರೆ ಈ ಚಿತ್ರದ ನಿರ್ದೇಶಕ ದೊರೈ ಭಗವಾನ್ ಹಾಗೂ ಅಣ್ಣಾವ್ರ ಅಭಿಮಾನಿಗಳಿಗೆ ಇದು ಬೇಸರ ತಂದಿತ್ತು.

ಚಿತ್ರದ ಹೆಸರು ಬದಲಿಸಲು ಒಪ್ಪಿದ ದಿನೇಶ್ ಬಾಬು

ಇದೀಗ ಡಾ. ರಾಜ್​ಕುಮಾರ್ ಅಭಿಮಾನಿಗಳ ಒತ್ತಾಯದ ಮೇರೆಗೆ ನಿರ್ದೇಶಕ ದಿನೇಶ್ ಬಾಬು ಚಿತ್ರದ ಟೈಟಲ್ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಸ್ತೂರಿ ಎಂದು ಹೆಸರಿಡುವುದಾಗಿ ದಿನೇಶ್ ಬಾಬು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ದಿನೇಶ್ ಬಾಬು

ABOUT THE AUTHOR

...view details