ಕರ್ನಾಟಕ

karnataka

By

Published : Apr 30, 2019, 1:22 PM IST

ETV Bharat / sitara

'ರಂಗನಾಯಕಿ' ಟೀಸರ್​​ ರಿಲೀಸ್​​​​​: ಟ್ಯಾಗ್​​ಲೈನ್ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ದಯಾಳ್​

ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಸಿನಿಮಾದ ಟ್ಯಾಗ್​​ಲೈನ್​ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ದಯಾಳ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ನನ್ನ ಮಹಿಳಾ ಪ್ರಧಾನ ಚಿತ್ರಗಳಿಗೆ ಇದೇ ಟೈಟಲ್ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ.

'ರಂಗನಾಯಕಿ'

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಸಿನಿಮಾ ಹೆಸರಿಗಿಂತ ಟ್ಯಾಗ್​​ಲೈನ್​​ಗಳು ಹೆಚ್ಚು ಸದ್ದು ಮಾಡುತ್ತಿವೆ. ಇತ್ತೀಚೆಗೆ ದಯಾಳ್ ಪದ್ಮನಾಭನ್ ಅವರ ಹೊಸ ಚಿತ್ರ 'ರಂಗನಾಯಕಿ' ಚಿತ್ರದ ಮುಹೂರ್ತ ನೆರವೇರಿದ್ದು, ಅದರ ಟ್ಯಾಗ್​​ಲೈನ್ ಕೂಡಾ ಚರ್ಚೆಗೆ ಗ್ರಾಸವಾಗಿದೆ.

ಟ್ಯಾಗ್​​ಲೈನ್ ಬಗ್ಗೆ ಸ್ಪಷ್ಟನೆ ನೀಡಿದ ದಯಾಳ್ ಪದ್ಮನಾಭನ್

ಮುಹೂರ್ತದಂದು ಚಿತ್ರದ ಟೀಸರ್ ಹಾಗೂ ಮೊದಲ ಪೋಸ್ಟರ್​ ಕೂಡಾ ಬಿಡುಗಡೆಯಾಗಿದ್ದು, 'ವಾಲ್ಯೂಮ್​​ 1 - ವರ್ಜಿನಿಟಿ' ಎಂಬ ಟ್ಯಾಗ್ ಲೈನ್ ನೀಡಲಾಗಿತ್ತು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಆರತಿ ಅಭಿನಯಿಸಿದ್ದ 'ರಂಗನಾಯಕಿ' ಸಿನಿಮಾ ಇಂದಿಗೂ ಜನರ ಮನಸಿನಲ್ಲಿದ್ದು, ಅದೊಂದು ಉತ್ತಮ ಚಿತ್ರವಾಗಿತ್ತು. ಅಂತಹ ಚಿತ್ರದ ಹೆಸರನ್ನು ಇರಿಸಿಕೊಂಡು ಆ ಚಿತ್ರಕ್ಕೆ ಈ ರೀತಿಯ ಟ್ಯಾಗ್​ಲೈನ್ ನೀಡಿದ್ದಾರೆ ಎಂದು ಕೆಲವರು ಮುಜುಗರ ವ್ಯಕ್ತಪಡಿಸಿದ್ದರು. ಈ ವಿಷಯ ಚರ್ಚೆಗೆ ಕೂಡಾ ಗ್ರಾಸವಾಗಿತ್ತು. ಈಗ ಈ ಕಾಂಟ್ರವರ್ಸಿಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಸ್ಪಷ್ಟನೆ ನೀಡಿದ್ದಾರೆ.

ಇದರಲ್ಲಿ ಮುಜುಗರವಾಗುವಂತಹ ಅಂಶ ಇಲ್ಲ. ಅಂದಿನ 'ರಂಗನಾಯಕಿ' ಮಹಿಳಾ ಪ್ರಧಾನ ಚಿತ್ರವಾಗಿತ್ತು. ಅದೇ ರೀತಿ ಈ ರಂಗನಾಯಕಿ ಚಿತ್ರವೂ ಸಹ ಮಹಿಳಾ ಪ್ರಧಾನ ಚಿತ್ರವಾಗಿದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನೂರು ಚಿತ್ರಗಳನ್ನು ಮಾಡಬಹುದಾದಂತ ಟೈಟಲನ್ನು ನಮಗೆ ಕೊಟ್ಟು ಹೋಗಿದ್ದಾರೆ. 'ರಂಗನಾಯಕಿ' ಟೈಟಲ್​​​​​​​​​ನಿಂದ ನೂರಾರು ನಾಯಕಿಯರನ್ನು ಹುಟ್ಟು ಹಾಕ‌ಬಹುದು. ಅಲ್ಲದೆ ನಾನು ಮುಂದಿನ‌ ದಿನಗಳಲ್ಲಿ ಇದೇ ಟೈಟಲ್ ಬಳಸಿ ಮತ್ತೆ ಮಹಿಳಾ ಪ್ರಧಾನ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಆ ಕಾರಣಕ್ಕಾಗಿ 'ವಾಲ್ಯೂಮ್​​ 1 - ವರ್ಜಿನಿಟಿ' ಎಂದು ಚಿತ್ರಕ್ಕೆ ಟ್ಯಾಗ್​​​​​​​​​​ಲೈನ್ ಕೊಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಈ ಚಿತ್ರ ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ‌ ಸುತ್ತ ಹೆಣೆದಿರುವ ಕಥೆಯಾಗಿದ್ದು, 'ವರ್ಜಿನಿಟಿ' ಸೂಕ್ತವಾದ ಟ್ಯಾಗ್​​​​​​​​​​​​​​​​​​​​​​​​​​​​​​ಲೈನ್​​. ಈಗಾಗಲೇ ನಾನು ನಾಲ್ಕೈದು ಮಹಿಳಾ ಪ್ರಧಾನ ಸಿನಿಮಾ ಕಥೆಗಳನ್ನು ರೆಡಿ ಮಾಡಿಕೊಂಡಿದ್ದೇನೆ. ವರ್ಷಕ್ಕೆ ಒಂದೊಂದು ಸಿನಿಮಾ ಮಾಡುತ್ತೇನೆ ಎಂದು ದಯಾಳ್ ಸ್ಪಷ್ಟನೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details