ಕರ್ನಾಟಕ

karnataka

ETV Bharat / sitara

ವಿಸ್ತಾರಗೊಂಡ 'ಕಬ್ಜ' ಸಿನಿಮಾ: ಎರಡನೇ ಭಾಗಕ್ಕೆ ನಿರ್ದೇಶಕ ಚಂದ್ರು ಚಿಂತನೆ - Director Chandru

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಚಂದ್ರು ಅವರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಕಬ್ಜ' ಸಿನಿಮಾವು ಎರಡು ಭಾಗಗಳಲ್ಲಿ ಮೂಡಿ ಬರಲಿದೆ.

Chandru
Chandru

By

Published : Oct 14, 2020, 6:49 PM IST

ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿರುವ ಆರ್.ಚಂದ್ರು ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಚಿತ್ರೀಕರಣದ ಹಂತದಲ್ಲಿ ಮತ್ತೊಂದು ಹೊಸ ಆಲೋಚನೆ ಮಾಡಿದ್ದಾರೆ.

'ಮೊದಲು ನಾವು ಒಂದೇ ಸಿನಿಮಾ ಮಾಡಲು ಪ್ಲಾನ್ ಮಾಡಿದ್ದೆವು. ಸೀಕ್ವೆಲ್ ತರುವ ಯೋಚನೆ ಇರಲಿಲ್ಲ. ಸ್ಕ್ರಿಪ್ಟ್ ರೆಡಿ ಇಟ್ಟುಕೊಂಡು ಶೂಟಿಂಗ್ ಶುರು ಮಾಡಿದ್ದೇವೆ. ಕ್ಲೈಮಾಕ್ಸ್ ಕೂಡ ಡಿಸೈನ್ ಮಾಡಲಾಗಿತ್ತು. ಆದರೆ ಲಾಕ್ ಡೌನ್ ಸಮಯದಲ್ಲಿ ಚಿತ್ರಕಥೆಯನ್ನು ಇನ್ನಷ್ಟು ವಿಸ್ತಾರಗೊಳಿಸಲಾಗಿದೆ ಎಂದಿದ್ದಾರೆ.

ಬಾಹುಬಲಿ ಚಿತ್ರ ಸ್ಫೂರ್ತಿ :

ಉಪೇಂದ್ರ ಅವರಿಗೆ ಮುಂದುವರೆದ ಭಾಗ ಇಷ್ಟವಾಗಿದೆ. ಕಬ್ಜ ಚಿತ್ರ ದೊಡ್ಡ ಮಟ್ಟದಲ್ಲಿ ಚಿತ್ರೀಕರಣಗೊಳ್ಳಲಿದೆ. ತೆಲುಗು ಭಾಷೆಯಲ್ಲಿ ನಿರ್ಮಾಣಗೊಂಡಿರುವ ಬಾಹುಬಲಿ ಚಿತ್ರ ನನಗೆ ಸ್ಫೂರ್ತಿಯಾಗಿದೆ. ಉಪೇಂದ್ರರಂತಹ ಸ್ಟಾರ್ ನಟ ಜೊತೆಯಲ್ಲಿ ಇರುವಾಗ ಯಾಕೆ ಈ ಪ್ರಯತ್ನ ಮಾಡಬಾರದು ಎಂದು ಚಿತ್ರಕಥೆಯನ್ನು ವಿಸ್ತರಿಸಲಾಗಿದೆ ಎಂದರು.

ಇಲ್ಲಿಯವರೆಗೆ ಶೇ. 40 ರಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾದ ಎರಡನೇ ಭಾಗ ಚಿಂತನೆ ಮನಸ್ಸಿನಲ್ಲಿಟ್ಟುಕೊಂಡು ಕ್ಲೈಮಾಕ್ಸ್ ಚಿತ್ರೀಕರಣ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಎಲ್ಲಾ ದೇಶಕ್ಕೂ ಅನ್ವಯ ಆಗುವಂತೆ ಕಥೆಯ ಆಯಾಮವನ್ನು ಸಿನಿಮಾದ ಎರಡನೇ ಭಾಗಕ್ಕೆ ಸಿದ್ಧ ಮಾಡಲಿದ್ದಾರೆ.

ಉಪೇಂದ್ರ ನಟನೆಯ ಮೊದಲ ಪ್ಯಾನ್ ಇಂಡಿಯಾ ಕಬ್ಜ ಬಹುಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಲಾಕ್ ಡೌನ್‌ನಿಂದ ನಿಂತಿದ್ದ ಚಿತ್ರೀಕರಣ ಆರಂಭಗೊಳ್ಳಲಿದೆ. ಇದಕ್ಕಾಗಿ 1947 ರ ಕಾಲದ ರಸ್ತೆ, ಮನೆಗಳು, ಮಾರುಕಟ್ಟೆ ಸೆಟ್ ಸಿದ್ಧ ಆಗುತ್ತಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಮಾಡಲಾಗುತ್ತದೆ. ಇದರ ಜೊತೆಗೆ ಇಟಲಿ, ನೇಪಾಳ, ದಕ್ಷಿಣ ಆಫ್ರಿಕಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಬೇಕಾಗಬಹುದೆಂಬ ಗುಟ್ಟನ್ನು ಚಂದ್ರು ಬಿಟ್ಟುಕೊಟ್ಟಿದ್ದಾರೆ.

ಕಬ್ಜ ಚಿತ್ರವನ್ನು ಎಂಟಿಬಿ ನಾಗರಾಜ್ ಅರ್ಪಿಸುತ್ತಿದ್ದು, ಶ್ರೀ ಸಿದ್ದೆಶ್ವರ ಎಂಟರ್ಪ್ರೈಸಸ್ ಅಡಿಯಲ್ಲಿ ತಯಾರಾಗುತ್ತಿದೆ. ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದ್ದು, ಮುನೀಂದ್ರ.ಕೆ ಪುರ ಹಾಗೂ ಆರ್.ರಾಜಶೇಖರ ಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್.ಎಸ್ ಸಂಕಲನ, ರಾಜು ಸುಂದರಂ, ಗಣೇಶ್ ಆಚಾರ್ಯ, ಶೇಖರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಉಪೇಂದ್ರ ಅವರ ಜೊತೆ ತಾರಾಗಣದಲ್ಲಿ ಕಾಮರಾಜನ್, ಜಗಪತಿ ಬಾಬು, ರಾಹುಲ್ ಜಗಪತ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್ ಹಾಗೂ ಇತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ABOUT THE AUTHOR

...view details