ಯುವ ಚಲನಚಿತ್ರ ನಿರ್ದೇಶಕ ಎಸ್. ಭರತ್ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.
ಕನ್ನಡದ ಯುವ ಚಲನಚಿತ್ರ ನಿರ್ದೇಶಕ ಭರತ್ ವಿಧಿವಶ - ಕನ್ನಡದ ಯುವ ನಿರ್ದೇಶಕ ಭರತ್ ವಿಧಿವಶ
'ಕಂಠಿ' ಹಾಗೂ ಮನೋರಂಜನ್ ನಟನೆಯ 'ಸಾಹೇಬ' ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಎಸ್. ಭರತ್ ಆರೋಗ್ಯದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.
![ಕನ್ನಡದ ಯುವ ಚಲನಚಿತ್ರ ನಿರ್ದೇಶಕ ಭರತ್ ವಿಧಿವಶ director Bharat dead](https://etvbharatimages.akamaized.net/etvbharat/prod-images/768-512-10003247-thumbnail-3x2-giri.jpg)
ಕನ್ನಡದ ಯುವ ನಿರ್ದೇಶಕ ಭರತ್ ವಿಧಿವಶ
45 ವರ್ಷದ ಭರತ್ ಆರೋಗ್ಯ ಸಮಸ್ಯೆಯಿಂದಾಗಿ ಚಾಮರಾಜನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಸಾವಿನ ನಂತ್ರ, ನಿರ್ದೇಶಕರಿಗೆ ಕೊರೊನಾ ಸೋಂಕು ತಗುಲಿತ್ತು ಎಂಬ ಸುದ್ದಿಗಳೂ ಕೇಳಿ ಬರುತ್ತಿವೆ. ಆದ್ರೆ ಇನ್ನು ಕೆಲವರು ಹೇಳುವ ಹಾಗೆ, ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದಲೂ ಭರತ್ ಬಳಲುತ್ತಿದ್ದರಂತೆ.
ನಿರ್ದೇಶಕ ಭರತ್ ವಿವಾಹಿತರಾಗಿದ್ದು, ಹೆಣ್ಣು ಮಗುವಿದೆ. ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದರು. ಇವರ ಮೃತದೇಹದ ಅಂತ್ಯಸಂಸ್ಕಾರವನ್ನು ಕೆಂಗೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.