ಡಾ. ರಾಜ್ ಕುಮಾರ್ ಅವರು ಅಭಿನಯಿಸಿರುವ ಸಿನಿಮಾಗಳಲ್ಲಿ ಬಹುತೇಕ ಸಿನಿಮಾಗಳನ್ನು ನಿರ್ದೇಶಿಸಿದ ಕೀರ್ತಿ ಹಿರಿಯ ನಿರ್ದೇಶಕ ದೊರೈ ಭಗವಾನ್ ಅವರಿಗೆ ಸಲ್ಲುತ್ತದೆ. ಈಗ ದೊರೈ ಅವರು ಇಲ್ಲ. ಆದರೆ ಅವರ ಸಹೋದರ ಭಗವಾನ್ ಇಂದಿಗೂ ಸಿನಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅಣ್ಣಾವ್ರ ಜೊತೆಗಿನ ಅನುಭವವನ್ನು ಸಿನಿಮಾ ಪತ್ರಿಕೆಯಲ್ಲಿ ಬರೆಯಲಿದ್ದಾರೆ ನಿರ್ದೇಶಕ ಭಗವಾನ್ - ಗಾನವಿ ಲಕ್ಷ್ಮಣ್ ಅಭಿನಯದ ಭಾವಚಿತ್ರ ಚಿತ್ರೀಕರಣ ಮುಕ್ತಾಯ
'ಸಂಧ್ಯಾರಾಗ' ಚಿತ್ರದಿಂದ 'ಒಡಹುಟ್ಟಿದವರು' ಸಿನಿಮಾದವರೆಗಿನ ಚಿತ್ರ ನಿರ್ದೇಶನ, ಅಣ್ಣಾವ್ರ ವ್ಯಕ್ತಿತ್ವ ಹಾಗೂ ಇನ್ನಿತರ ಅಂಶಗಳ ಬಗ್ಗೆ ಬರೆಯಲು ಎಸ್.ಕೆ. ಭಗವಾನ್ ಆರಂಭಿಸಲಿದ್ದಾರಂತೆ. ಈ ಬರಹ ಖ್ಯಾತ 'ರೂಪತಾರಾ' ಸಿನಿಮಾ ಪತ್ರಿಕೆಯಲ್ಲಿ ಈ ತಿಂಗಳ ಸಂಚಿಕೆಯಿಂದ 'ರಾಜ್-ಭಗವಾನ್' ಎಂಬ ಹೆಸರಿನಲ್ಲಿ ಪ್ರಕಟವಾಗಲಿದೆ.
ಭಗವಾನ್ ಅವರಿಗೆ ಇದೀಗ 85 ವರ್ಷ. 2020 ರ ಹೊಸ ವರ್ಷಕ್ಕೆ ಅವರು ಒಂದು ಸಂಕಲ್ಪ ಮಾಡಿದ್ದಾರೆ. ಅವರು ನಟ ಸಾರ್ವಭೌಮ ಡಾ. ರಾಜ್ಕುಮಾರ್ ಅವರ ಬಗ್ಗೆ ಅನುಭವ ಹಂಚಿಕೊಳ್ಳಲಿದ್ದಾರೆ. ಎಸ್.ಕೆ. ಭಗವಾನ್ ಅವರು ಡಾ. ರಾಜ್ಕುಮಾರ್ ಬಗ್ಗೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಪುಸ್ತಕ ಬರೆಯುವ ಪ್ಲ್ಯಾನ್ ಮಾಡಿದ್ದರು. ಆದರೆ ಇದು ಇಂದು ನಿನ್ನೆಯದಲ್ಲ. ಅದು ಬಹಳ ದಿನಗಳಿಂದಲೂ ಅವರಿಗೆ ಈ ಅಲೋಚನೆಯಿತ್ತು. ಡಾ. ರಾಜ್ಕುಮಾರ್ ಅವರು ನಟಿಸಿದ್ದ ಪಾತ್ರಗಳನ್ನು ಬೇರೆ ಯಾರೂ ಮಾಡಲಾಗುತ್ತಿರಲಿಲ್ಲ ಎಂಬುದು ಭಗವಾನ್ ಅವರ ಅಭಿಪ್ರಾಯ. 'ಸಂಧ್ಯಾರಾಗ' ಚಿತ್ರದಿಂದ 'ಒಡಹುಟ್ಟಿದವರು' ಸಿನಿಮಾದವರೆಗಿನ ಚಿತ್ರ ನಿರ್ದೇಶನ, ಅಣ್ಣಾವ್ರ ವ್ಯಕ್ತಿತ್ವ ಹಾಗೂ ಇನ್ನಿತರ ಅಂಶಗಳ ಬಗ್ಗೆ ಬರೆಯಲು ಆರಂಭಿಸಿದ್ದಾರಂತೆ. ಈ ಬರಹ ಖ್ಯಾತ 'ರೂಪತಾರಾ' ಸಿನಿಮಾ ಪತ್ರಿಕೆಯಲ್ಲಿ ಈ ತಿಂಗಳ ಸಂಚಿಕೆಯಿಂದ 'ರಾಜ್-ಭಗವಾನ್' ಎಂಬ ಹೆಸರಿನಲ್ಲಿ ಪ್ರಕಟವಾಗಲಿದೆ.