ಕರ್ನಾಟಕ

karnataka

ETV Bharat / sitara

ಮನಮೆಚ್ಚಿದ ಹುಡುಗಿ ಜೊತೆ ಹಸೆಮಣೆ ಏರಿದ 'ಅದ್ಧೂರಿ' ಡೈರೆಕ್ಟರ್​... - Kannada cinema news

ಅದ್ಧೂರಿ, ಅಂಬಾರಿ ಐರಾವತ ,ಕಿಸ್ ಚಿತ್ರಗಳ ನಿರ್ದೇಶನ ಮಾಡಿದ್ದ ಎಪಿ ಅರ್ಜುನ್, ಅನ್ನಪೂರ್ಣ ಬಿ. ಆರ್ ಜೊತೆ ಸಪ್ತಪದಿ ತುಳಿದಿದ್ದಾರೆ‌.

Director and producer AP Arjun got married
ಮನಮೆಚ್ಚಿದ ಹುಡುಗಿ ಜೊತೆ ಹಸೆಮಣೆ ಏರಿದ 'ಅದ್ಧೂರಿ' ಲವರ್ಸ್​

By

Published : May 10, 2020, 11:19 AM IST

ಲಾಕ್​ಡೌನ್ ನಡುವೆಯೂ ಸ್ಯಾಂಡಲ್​ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ ಜೋರಾಗಿದ್ದು, ಇಂದು ನಿರ್ದೇಶಕ, ನಿರ್ಮಾಪಕ ಎ.ಪಿ ಅರ್ಜುನ್ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.

ಅದ್ಧೂರಿ, ಅಂಬಾರಿ, ಐರಾವತ ,ಕಿಸ್ ಚಿತ್ರಗಳ ನಿರ್ದೇಶನ ಮಾಡಿದ್ದ ಎಪಿ ಅರ್ಜುನ್ ಇಂದು ಬಹುಕಾಲದ ಗೆಳತಿ ಹಾಸನ‌ ಮೂಲದ ಯುವತಿ ಅನ್ನಪೂರ್ಣ ಬಿ. ಆರ್ ಜೊತೆ ಸಪ್ತಪದಿ ತುಳಿದಿದ್ದಾರೆ‌.

ವಿವಾಹ ಸಂಭ್ರಮ

ಲಾಕ್​ಡೌನ್ ಹಿನ್ನೆಲೆ ರಾಮಸಂದ್ರದ ಮಹಾಲಕ್ಷ್ಮಿ ಎನ್ ಕ್ಲೇವ್​ನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಅನ್ನಪೂರ್ಣ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿದ್ದು, ಇಬ್ಬರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದು ಈಗ ಹೊಸ ಜೀವನಕ್ಕೆ ಕಾಲಿಸಿರಿದ್ದಾರೆ.

ABOUT THE AUTHOR

...view details