ಕರ್ನಾಟಕ

karnataka

ETV Bharat / sitara

‘ಹಗಲು ಕನಸು’ ಕಾಣಲು ಹೊರಟ ದಿನೇಶ್ ಬಾಬು.. 96ರ ಅಪ್ಪನ ಬಗ್ಗೆ ಒಂದಿಷ್ಟು ಮಾತು !

ಸುಪ್ರಭಾತ, ಇನ್ಸ್‌ಪೆಕ್ಟರ್ ವಿಕ್ರಂ, ಲಾಲಿ ಮುಂತಾದ ಯಶಸ್ವಿ ಚಿತ್ರಗಳನ್ನು ಕನ್ನಡದಲ್ಲಿ ನೀಡಿರುವ ನಿರ್ದೇಶಕ ದಿನೇಶ್ ಬಾಬು ಈಗ ‘ಹಗಲು ಕನಸು’ ಚಿತ್ರವನ್ನು ಪೂರ್ಣಗೊಳಿಸಿ ಬಿಡುಗಡೆಯ ತಯಾರಿಯಲ್ಲಿದ್ದಾರೆ.

ದಿನೇಶ್ ಬಾಬು

By

Published : May 10, 2019, 10:52 AM IST

ಬೆಂಗಳೂರು:ಕನ್ನಡದಲ್ಲಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ದಿನೇಶ್ ಬಾಬು ಈಗ ಛಾಯಾಗ್ರಹಣ ಹಾಗೂ ನಿರ್ದೇಶನ ಸೇರಿ 110 ಸಿನಿಮಾಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅತೀ ಹೆಚ್ಚು ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಛಾಯಾಗ್ರಹಣವನ್ನು ಮಾಡಿರುವ ಇವರು ಕನ್ನಡಲ್ಲಿ 45 ಸಿನಿಮಾಗಳ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಸುಪ್ರಭಾತ, ಇನ್ಸ್‌ಪೆಕ್ಟರ್ ವಿಕ್ರಂ, ಲಾಲಿ, ಅಮೃತವರ್ಷಿಣಿ, 48 ಘಂಟೆಗಳಲ್ಲಿ ಚಿತ್ರೀಕರಣ ಮಾಡಿದ ಸಿನಿಮಾ ಇದು ಸಾಧ್ಯ, ಮಿಸ್ಟರ್ ಗರಗಸ, ಎರಡನೇ ಮದುವೆ.. ಹೀಗೆ ಅವರು ನಿರ್ದೇಶಿಸಿರುವ ಕನ್ನಡದ ಸಾಲು ಸಾಲು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇವರ ಹಿಂದಿನ ಎರಡು ಸಿನಿಮಾಗಳು ಪ್ರಿಯಾಂಕಾ ಹಾಗೂ ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಈಗ ಈ ಮಲಯಾಳಿ ಮಾಂತ್ರಿಕ ದಿನೇಶ್ ಬಾಬು ‘ಹಗಲು ಕನಸು’ ಸಿನಿಮಾ ಪೂರ್ಣಗೊಳಿಸಿದ್ದಾರೆ.

ಹಾಸನದ ಅರಸೀಕೆರೆ ಬಳಿಯ ಒಂದು ದೊಡ್ಡ ಮನೆಯಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ಮಾಡಿ ಮುಸಿದ್ದಾರೆ. ಈ ಚಿತ್ರದಲ್ಲಿ ಮಾಸ್ಟರ್ ಆನಂದ್ ಹಾಗೂ ಸನಿಹ ಯಾದವ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ನಿಜ ಜೀವನದ ಕಥೆಗಳನ್ನು ತೆರೆಯಮೇಲೆ ತರುವ ದಿನೇಶ್ ಬಾಬು ಇತ್ತೀಚೆಗೆ ತಮ್ಮ ಚಿತ್ರಕ್ಕೆ ತಾವೇ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ನೀನಾಸಂ ಅಶ್ವಥ್, ಅಶ್ವಿನ್ ಹಾಸನ್, ಮನದೀಪ್ ರಾಯ್, ವಾಣಿಶ್ರೀ, ಚೀತ್ಕಾಲ ಬಿರಾದರ್, ಅರುಣ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ದಿನೇಶ್ ಬಾಬು ಸ್ನೇಹಿತರಾದ ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಸಾಮಾನ್ಯವಾಗಿ ಮಾತಿಗೆ ಸಿಗದ ದಿನೇಶ್ ಬಾಬು ಗುರುವಾರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತಿಗೆ ಸಿಕ್ಕು ಚಿತ್ರದ ಕುರಿತ ಕೆಲ ಮಾಹಿತಿಯನ್ನು ಹೊರಹಾಕಿದ್ದಾರೆ.‘ಹಗಲು ಕನಸು’ ನಂತರ ಮತ್ತೊಂದು ನೈಜ ಕಥೆ ಆಧಾರಿತ ಸಿನಿಮಾಕ್ಕೆ ಚಿತ್ರಕಥೆ ಸಿದ್ದ ಮಾಡಿಕೊಂಡಿರುವ ದಿನೇಶ್ ಬಾಬು ಆತ್ಮಚರಿತ್ರೆ ಬರೆಯುವುದಕ್ಕೆ ಕೆಲ ಬಾರಿ ಯೋಚಿಸಿದ್ದಾರಂತೆ. ಒಬ್ಬ ನಿರ್ದೇಶಕ ಕಮ್ ಛಾಯಾಗ್ರಾಹ 110 ಸಿನಿಮಾ ಮಾಡಿರುವುದು ಸಿಗುವುದಿಲ್ಲ. ಆದರೆ, ಆತ್ಮ ಚರಿತ್ರೆಯಲ್ಲಿ ನಿಜ ಬರಿಯಬೇಕು, ಆದ್ದರಿಂದ ನಾನು ಬಹಳ ಶತ್ರುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿ ಸುಮ್ಮನಾಗುತ್ತಾರೆ.

ಇವರು 96ರ ತಮ್ಮ ತಂದೆಯನ್ನು ನೋಡಲು ಪದೇಪದೆ ಕೇರಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ನಮ್ಮ ತಂದೆಗೆ 96 ವರ್ಷವಾಗಿದ್ದು ಈ ವಯಸ್ಸಿನಲ್ಲೂ ಬಹಳ ಪ್ರಾಕ್ಟಿಕಲ್ ಆಸಾಮಿ. ಸಾವು ನನ್ನನ್ನು ಸಮೀಪಿಸುತ್ತಿದೆ. ಮನೆಯ ಅಂಗಳವನ್ನು ಸ್ವಚ್ಛ ಮಾಡಿಸು. ಯಾಕಂದ್ರೆ ನನ್ನನ್ನು ನೋಡಲು ಬರುವರು ಅಲ್ಲಿ ನಿಂತುಕೊಂಡು ಹೋಗಬೇಕಾಗುತ್ತದೆ ಅನ್ನುತ್ತಾರಂತೆ. ಸತ್ತ ಮೇಲೆ ಇದೆಲ್ಲ ನಿನಗೆ ಅದೆಲ್ಲ ಹ್ಯಾಗೆ ಗೊತ್ತಾಗುತ್ತೆ ಸುಮ್ಮನಿರು ಎಂದು ದಿನೇಶ್ ಬಾಬು ಖಡಕ್ ಉತ್ತರ ನೀಡಿದರೆ ಅದಕ್ಕೆ ಅವರ ತಂದೆ ನಗುವೇ ಉತ್ತರವಂತೆ.

For All Latest Updates

TAGGED:

ABOUT THE AUTHOR

...view details