ಕರ್ನಾಟಕ

karnataka

ETV Bharat / sitara

ದಿನೇಶ್ ಬಾಬು ನಿರ್ದೇಶನದ 50 ನೇ ಕನ್ನಡ ಸಿನಿಮಾಗೆ ಆ ಖ್ಯಾತ ನಟಿ ನಾಯಕಿ - Dimple queen Rachita ram

ಸುಪ್ರಭಾತ, ಅಮೃತವರ್ಷಿಣಿ, ಲಾಲಿ, ಚಿತ್ರ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ನಿರ್ದೇಶಕ ದಿನೇಶ್ ಬಾಬು ಇದೀಗ 50 ನೇ ಚಿತ್ರವನ್ನು ನಿರ್ದೇಶಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದು ಚಿತ್ರಕ್ಕೆ ರಚಿತಾ ರಾಮ್ ಅವರನ್ನು ನಾಯಕಿನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Dinesh babu 50th Kannada film direction
ದಿನೇಶ್ ಬಾಬು

By

Published : Aug 28, 2020, 10:20 AM IST

ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸೃಜನಶೀಲ ನಿರ್ದೇಶಕ ಕಂ ಛಾಯಾಗ್ರಾಹಕ, ದಿನೇಶ್ ಬಾಬು ಇದೀಗ ತಮ್ಮ ವೃತ್ತಿ ಜೀವನದ 50ನೇ ಕನ್ನಡ ಸಿನಿಮಾವನ್ನು ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ದಿನೇಶ್ ಬಾಬು

ಇದು ನಾಯಕಿ ಪ್ರಧಾನ ಚಿತ್ರವಾಗಿದ್ದು ದಿನೇಶ್ ಬಾಬು ತಮ್ಮ 50ನೇ ಚಿತ್ರಕ್ಕೆ ರಚಿತಾ ರಾಮ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೊಂದು ಹಾರರ್​​​ ಸಿನಿಮಾ ಎನ್ನಲಾಗಿದೆ. ಚಿತ್ರಕ್ಕೆ ಯಾಮಿನಿ ಎಂಬ ಹೆಸರು ಇಡಲಾಗಿದೆ ಎನ್ನಲಾದರೂ ಈಗಾಗಲೇ ಯಾಮಿನಿ ಎಂಬ ಹೆಸರು ಬೇರೆ ತಂಡದಿಂದ ರಿಜಿಸ್ಟರ್ ಆಗಿದ್ದು ಆ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ದಿನೇಶ್ ಬಾಬು ಮಾತ್ರ ಈ ಚಿತ್ರಕ್ಕೆ 'ನೀಲಾಂಬರಿ' ಚಿತ್ರದಂತ ಟೈಟಲ್ ಬೇಕು ಎನ್ನುತ್ತಿದ್ದಾರೆ. ಅದು ನಾಯಕಿ ಹೆಸರು ಕೂಡಾ ಆಗಿರಬೇಕು, ಸಿನಿಮಾ ಹೆಸರೂ ಆಗಿರಬೇಕು ಎಂದು ದಿನೇಶ್ ಬಾಬು ಹೇಳಿಕೊಂಡಿದ್ದಾರೆ.

ನಿರ್ದೇಶಕ ದಿನೇಶ್ ಬಾಬು

ಶೀಘ್ರದಲ್ಲಿ ದಿನೇಶ್ ಬಾಬು ಅವರ ಈ ಸಿನಿಮಾ ಸೆಟ್ಟೇರಲಿದೆ. ನಿರ್ದೇಶನಲ್ಲಿ ಇದು ಅವರ 50ನೇ ಸಿನಿಮಾ ಆದರೂ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಛಾಯಾಗ್ರಹಣ ಹಾಗೂ ನಿರ್ದೇಶನ ಸೇರಿ 100 ರ ಗಡಿ ದಾಟಿದ್ದಾರೆ. ಈ ಹಿಂದೆ 'ಕನಕಾಂಬರಿ' ಎಂಬ ಹಾರರ್ ಹಾಗೂ ಸಾಮಾಜಿಕ ಕಥಾ ವಸ್ತು ಇರುವ ಚಿತ್ರವನ್ನು ದಿನೇಶ್ ಬಾಬು ನಿರ್ದೇಶನ ಮಾಡಿದ್ದರು.

ದಿನೇಶ್ ಬಾಬು ಅವರ ಹೊಸ ಚಿತ್ರವನ್ನು ರವೀಶ್​ ಆರ್​​.ಸಿ ಹಾಗೂ ರುಬಿನ್ ರಾಜ್​ ಎಂಬುವವರು ನಿರ್ಮಿಸುತ್ತಿದ್ದಾರೆ. ದಿನೇಶ್ ಬಾಬು ನಿರ್ದೇಶನ ಮಾತ್ರವಲ್ಲದೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್​​​​​​​​​. ದಾಸ್ ಛಾಯಾಗ್ರಹಣ, ಪಿ.ಆರ್​​​​. ಸೌಂದರ್ ರಾಜ್ ಸಂಕಲನ , ಗುಮ್ಮಿನೆನಿ ವಿಜಯ್ ಸಂಗೀತ ಇದೆ.

ರಚಿತಾ ರಾಮ್

ಇನ್ನು ರಚಿತಾ ರಾಮ್​​ ಇದುವರೆಗೂ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಜೊತೆಗೆ ದಿನೇಶ್ ಬಾಬು ಅವರಂತ ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ ಅವರಿಗೆ ದೊರೆತಿರಲಿಲ್ಲ. ಆದ್ದರಿಂದ ರಚಿತಾ ಈ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ರಚಿತಾ ಈಗಾಗಲೇ ಸಖತ್ ಬ್ಯುಸಿ ಇದ್ದಾರೆ. ಏಕ್ ಲವ್ ಯಾ, 100, ಸೂಪರ್ ಮಚ್ಚಿ, ರವಿ ಬೋಪಣ್ಣ ಬಿಡುಗಡೆ ಆಗಬೇಕಿರುವ ಚಿತ್ರಗಳು. ಮಾನ್ಸೂನ್ ರಾಗ, ಏಪ್ರಿಲ್, ವೀರಮ್, ಸೀರೆ, ಕೋಲಮಾವು ಕೋಕಿಲ ರಚಿತಾ ಒಪ್ಪಿಕೊಂಡಿರುವ ಚಿತ್ರಗಳು.

ABOUT THE AUTHOR

...view details