ಕರ್ನಾಟಕ

karnataka

ETV Bharat / sitara

ಅದ್ದೂರಿ ಸೆಟ್​​​​​​ನಲ್ಲಿ ಶ್ರೀಮುರಳಿ, ಡಿಂಪಲ್ ಕ್ವೀನ್​ ಡ್ಯಾನ್ಸ್​ 'ಭರಾಟೆ'​​ - undefined

'ಭರಾಟೆ' ಚಿತ್ರಕ್ಕಾಗಿ ಶ್ರೀಮುರಳಿ ಹಾಗೂ ರಚಿತಾ ರಾಮ್ ಒಟ್ಟಿಗೆ ಹೆಜ್ಜೆ ಹಾಕಿದ್ದು ಹಾಡಿನ ಶೂಟಿಂಗ್​​​​ಗಾಗಿ ನೆಲಮಂಗಲದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್​​ ಹಾಕಲಾಗಿದೆ. ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾ ಜೂನ್​ನಲ್ಲಿ ಬಿಡುಗಡೆಯಾಗಲಿದೆ.

ರಚಿತಾ ರಾಮ್​, ಶ್ರೀಮುರಳಿ

By

Published : Apr 4, 2019, 12:50 PM IST

ಚೇತನ್ ಕುಮಾರ್ ನಿರ್ದೇಶಿಸುತ್ತಿರುವ, ರೋರಿಂಗ್ ಸ್ಟಾರ್ ಶ್ರೀಮುರಳಿ ವಿಭಿನ್ನ ಲುಕ್​​​ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಭರಾಟೆ' ಸಿನಿಮಾ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದೆ.

ಕೆಲವು ದಿನಗಳ ಹಿಂದೆ ಒಂಭತ್ತು ವಿಲನ್​​​​ಗಳ ಜೊತೆ ಅದ್ದೂರಿ ಕ್ಲೈಮ್ಯಾಕ್ಸ್ ಆ್ಯಕ್ಷನ್ ಚಿತ್ರೀಕರಣ ಮುಗಿದಿತ್ತು. ಇದೀಗ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಶ್ರೀ ಮುರಳಿ ಡ್ಯಾನ್ಸ್ ಮಾಡಿರುವ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ. 'ರಥಾವರ' ಸಿನಿಮಾದಲ್ಲಿ ರಚಿತಾ ಹಾಗೂ ಮುರಳಿ ಒಟ್ಟಿಗೆ ನಟಿಸಿದ್ದರು. ಇದೀಗ 'ಭರಾಟೆ' ಸಿನಿಮಾದ ವಿಶೇಷ ಹಾಡೊಂದಕ್ಕೆ ರಚಿತಾ ರಾಮ್​​ ಜೊತೆ ಶ್ರೀಮುರಳಿ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.

ಶ್ರೀಮುರಳಿ ಜೊತೆ ರಚಿತಾ ಡ್ಯಾನ್ಸ್

ಹಾಡಿನ ಚಿತ್ರೀಕರಣ ಬೆಂಗಳೂರಿನ ನೆಲಮಂಗಲದ ಬಳಿ ನಡೆಯುತ್ತಿದೆ. ಕಪ್ಪು ಮತ್ತು ಹಳದಿ ಬಣ್ಣದ ಕಾಸ್ಟ್ಯೂಮ್​​​​​​​​​​​ನಲ್ಲಿ ರಚಿತಾ ಮಿಂಚುತ್ತಿದ್ದಾರೆ. ಈ ಟೈಟಲ್ ಹಾಡಿಗಾಗಿ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್​​ ಹಾಕಲಾಗಿದೆ. ಈ ದೊಡ್ಡ ಸೆಟ್​​​​​​​​​​ನಲ್ಲಿ ಸುಮಾರು 150ಕ್ಕೂ ಹೆಚ್ಚು ಜ್ಯೂನಿಯರ್ ಡ್ಯಾನ್ಸರ್​​​​ಗಳ ಜೊತೆ ಮುರಳಿ ಹಾಗೂ ರಚಿತಾ ರಾಮ್ ಡ್ಯಾನ್ಸ್ ಮಾಡಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ.

'ಭರಾಟೆ' ಚಿತ್ರಕ್ಕೆ ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಶ್ರೀಲೀಲಾ ಮುರಳಿಗೆ ನಾಯಕಿಯಾಗಿ ನಟಿಸಿದ್ದು ಜೂನ್​​ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

For All Latest Updates

TAGGED:

ABOUT THE AUTHOR

...view details