ನಿರ್ದೇಶಕ ಪ್ರೇಮ್ ತಮ್ಮ ಮೈದುನ ರಾಣಾಗಾಗಿ 'ಏಕ್ ಲವ್ ಯಾ' ಸಿನಿಮಾ ಮಾಡುತ್ತಿರುವುದು ತಿಳಿದ ವಿಷಯ. ನಾಳೆ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ವಿಶೇಷವಾಗಿ 'ಏಕ್ ಲವ್ ಯಾ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಕೊಡಗಿನ ರೀಷ್ಮಾ ರಾಣಾಗೆ ನಾಯಕಿಯಾಗಿ ನಟಿಸಿದ್ದರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
'ಏಕ್ ಲವ್ ಯಾ' ನಲ್ಲಿ ಲಿಪ್ಲಾಕ್ ಜೊತೆಗೆ ಧಮ್ ಎಳೆದ ಡಿಂಪಲ್ ಕ್ವಿನ್...! - ರಾಣಾ ಜೊತೆ ಲಿಪ್ಲಾಕ್ ಮಾಡಿದ ರಚಿತಾ
'ಏಕ್ ಲವ್ ಯಾ' ಚಿತ್ರದಲ್ಲಿ ರಚಿತಾ, ರಾಣಾ ಜೊತೆ ಬೋಲ್ಡ್ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಯುವ ನಟ ರಾಣಾ ಜೊತೆಗೆ ರಚಿತಾ ಲಿಪ್ಲಾಕ್ ಮಾಡಿದ್ದಾರಂತೆ. ಅಷ್ಟೇ ಅಲ್ಲ, ರಚಿತಾ ಈ ಚಿತ್ರದಲ್ಲಿ ಸಿಗರೇಟ್ ಕೂಡಾ ಸೇದಿದ್ದು ಡಿಂಪಲ್ ಕ್ವೀನ್ ಸಿಗರೇಟ್ ಸೇದುವ ಫೋಟೋಗಳು ರಿವೀಲ್ ಆಗಿವೆ

ಉಪೇಂದ್ರ ಜೊತೆ 'ಐ ಲವ್ ಯು' ಚಿತ್ರದಲ್ಲಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೀಗ 'ಏಕ್ ಲವ್ ಯಾ' ಚಿತ್ರದಲ್ಲಿ ಕೂಡಾ, ರಚಿತಾ ರಾಣಾ ಜೊತೆ ಬೋಲ್ಡ್ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಯುವ ನಟ ರಾಣಾ ಜೊತೆಗೆ ರಚಿತಾ ರಾಮ್ ಲಿಪ್ಲಾಕ್ ಮಾಡಿದ್ದಾರಂತೆ. ಅಷ್ಟೇ ಅಲ್ಲ, ರಚಿತಾ ಈ ಚಿತ್ರದಲ್ಲಿ ಸಿಗರೇಟ್ ಕೂಡಾ ಸೇದಿದ್ದು ಡಿಂಪಲ್ ಕ್ವೀನ್ ಸಿಗರೇಟ್ ಸೇದುವ ಫೋಟೋಗಳು ರಿವೀಲ್ ಆಗಿವೆ. ಫೋಟೋ ನೋಡಿದ ರಚಿತಾ ಅಭಿಮಾನಿಗಳು ಆಕೆ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿರುವ 'ಏಕ್ ಲವ್ ಯಾ' ಸ್ಯಾಂಡಲ್ವುಡ್ನಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಸದ್ದು ಮಾಡುತ್ತಿದೆ. ಪತ್ನಿ ರಕ್ಷಿತಾ ಪ್ರೇಮ್ ಸಹೋದರ ರಾಣಾ, ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಆಗಲು ರೆಡಿಯಾಗುತ್ತಿದ್ದಾರೆ. ರಕ್ಷಿತಾ ಪ್ರೇಮ್ ತಮ್ಮನ ಚಿತ್ರಕ್ಕೆ ಬಂಡವಾಳ ಹೂಡಿದ್ದು ನಾಳೆ ಟೀಸರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.