ಕರ್ನಾಟಕ

karnataka

ETV Bharat / sitara

ಕೃಷ್ಣಸುಂದರಿಯ ಅಖಿಲ್ ಆಗಿ ಮೋಡಿ ಮಾಡುತ್ತಿರುವ ದಿಲೀಪ್ ಶೆಟ್ಟಿ - ನಟ ದಿಲೀಪ್ ಶೆಟ್ಟಿ,

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ದಿಲೀಪ್ ಫೈನಲ್ ತನಕ ಬಂದಿದ್ದರು. ಇದರ ಹೊರತಾಗಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುವ ಮೂಲಕ ಹಿರಿತೆರೆಗೆ ಹಾರಿದ್ದಾರೆ ದಿಲೀಪ್ ಶೆಟ್ಟಿ..

Dilip Shetty acting, Dilip Shetty acting in Krishna Sundari serial, actor Dilip Shetty, actor Dilip Shetty news,  ಕೃಷ್ಣಸುಂದರಿಯ ಅಖಿಲ್ ಆಗಿ ಮೋಡಿ ಮಾಡುತ್ತಿರುವ ದಿಲೀಪ್ ಶೆಟ್ಟಿ, ಕೃಷ್ಣಸುಂದರಿಯ ಅಖಿಲ್ ಆಗಿ ಮೋಡಿ ಮಾಡುತ್ತಿರುವ ದಿಲೀಪ್ ಶೆಟ್ಟಿ ಸುದ್ದಿ, ನಟ ದಿಲೀಪ್ ಶೆಟ್ಟಿ, ನಟ ದಿಲೀಪ್ ಶೆಟ್ಟಿ ಸುದ್ದಿ,
ಕೃಷ್ಣಸುಂದರಿಯ ಅಖಿಲ್ ಆಗಿ ಮೋಡಿ ಮಾಡುತ್ತಿರುವ ದಿಲೀಪ್ ಶೆಟ್ಟಿ

By

Published : May 19, 2021, 2:28 PM IST

ಕೃಷ್ಣ ಸುಂದರಿ ಧಾರಾವಾಹಿಯು ತೆಲುಗು ಭಾಷೆಯಾಗಿದ್ದು, ಅದರಲ್ಲಿ ನಾಯಕ ಅಖಿಲ್ ಆಗಿ ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ಹುಡುಗ ದಿಲೀಪ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಇದೀಗ ಕೃಷ್ಣ ಸುಂದರಿ ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು, ಆ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ ದಿಲೀಪ್ ಶೆಟ್ಟಿ.

ಕೃಷ್ಣಸುಂದರಿಯ ಅಖಿಲ್ ಆಗಿ ಮೋಡಿ ಮಾಡುತ್ತಿರುವ ದಿಲೀಪ್ ಶೆಟ್ಟಿ

ತಾಯಿಯೇ ತನ್ನ ಪ್ರಪಂಚ ಎನ್ನುವ ಅಮ್ಮನ ಮುದ್ದು ಮಗ ಅಖಿಲ್ ವಿದ್ಯಾವಂತ ಹಾಗೂ ಬುದ್ದಿವಂತ. ಇನ್ನು, ಇದರ ಹೊರತಾಗಿ ಮೋಸಗಾರರನ್ನು ದಂಡಿಸುವ ಧೈರ್ಯ ಇರುವ ಈತನಿಗೆ ಕತ್ತಲೆ ಎಂದರೆ ತುಂಬಾನೇ ಭಯ.

ಈ ಭಯದ ಹಿಂದೆ ಒಂದು ನಿಗೂಢವಾದ ರಹಸ್ಯವಿದ್ದು, ಅದೇನೆಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇದರ ಹೊರತಾಗಿ ಇಂಪಾದ ಸಂಗೀತಕ್ಕೆ ಮನಸೋಲುವ ಸಂಗೀತ ಪ್ರಿಯ. ಇದು ಅಖಿಲ್ ಪಾತ್ರದ ಸಂಕ್ಷಿಪ್ತ ಪರಿಚಯ.

ಕೃಷ್ಣಸುಂದರಿಯ ಅಖಿಲ್ ಆಗಿ ಮೋಡಿ ಮಾಡುತ್ತಿರುವ ದಿಲೀಪ್ ಶೆಟ್ಟಿ

ವಿದ್ಯಾವಿನಾಯಕ ಧಾರಾವಾಹಿಯ ವಿನಾಯಕ ಆಗಿ ಕಿರುತೆರೆಗೆ ಕಾಲಿಟ್ಟ ದಿಲೀಪ್ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ ತೆಲುಗಿನ ಸ್ವರ್ಣ ಖಡ್ಗಂ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದ ದಿಲೀಪ್ ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಾಯಕ ರಾಘವ್ ಆಗಿ ನಟಿಸುತ್ತಿದ್ದಾರೆ.

ಕೃಷ್ಣಸುಂದರಿಯ ಅಖಿಲ್ ಆಗಿ ಮೋಡಿ ಮಾಡುತ್ತಿರುವ ದಿಲೀಪ್ ಶೆಟ್ಟಿ

ಮಾಡೆಲಿಂಗ್ ಮೂಲಕ ಬಣ್ಣದ ನಂಟು ಬೆಳೆಸಿಕೊಂಡು ಸದ್ಯ ನಟನ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ದಿಲೀಪ್ ಶೆಟ್ಟಿ ನಟನೆಯ ಹೊರತಾಗಿ ನೃತ್ಯಗಾರರಾಗಿಯೂ ಮೋಡಿ ಮಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ದಿಲೀಪ್ ಫೈನಲ್ ತನಕ ಬಂದಿದ್ದರು. ಇದರ ಹೊರತಾಗಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುವ ಮೂಲಕ ಹಿರಿತೆರೆಗೆ ಹಾರಿದ್ದಾರೆ ದಿಲೀಪ್ ಶೆಟ್ಟಿ.

ABOUT THE AUTHOR

...view details