ಕರ್ನಾಟಕ

karnataka

ETV Bharat / sitara

2022ರವರೆಗೆ ರಾಷ್ಟ್ರೀಯ ಸದ್ಭಾವನಾ ರಾಯಭಾರಿಯಾಗಿ ನಟಿ ದಿಯಾ ಮಿರ್ಜಾ ಮುಂದುವರಿಕೆ.. - ದಿಯಾ ಮಿರ್ಜಾ

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದೊಂದಿಗಿನ ನನ್ನ ಒಡನಾಟವು ಉತ್ತಮವಾಗಿದೆ. ಇದರಿಂದ ನಾನು ತುಂಬಾ ಕಲಿತಿದ್ದೇನೆ. ಪರಿಸರದ ಜೊತೆ ಕಾರ್ಯನಿರ್ವಹಿಸಲು, ವನ್ಯಜೀವಿಗಳನ್ನು ರಕ್ಷಿಸಲು, ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳಲು ನಾವು ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ನಟಿ ದಿಯಾ ಹೇಳಿದ್ದಾರೆ.

Dia Mirza's tenure as UNEP Goodwill Ambassador extended till 2022
2022ರವರೆಗೆ ರಾಷ್ಟ್ರೀಯ ಸದ್ಭಾವನಾ ರಾಯಭಾರಿಯಾಗಿ ದಿಯಾ ಮಿರ್ಜಾ

By

Published : May 7, 2020, 5:12 PM IST

ನಟಿ, ನಿರ್ಮಾಪಕಿ ಹಾಗೂ ಪರಿಸರವಾದಿ ದಿಯಾ ಮಿರ್ಜಾ ಅವರನ್ನು ಮುಂದಿನ 2022ರವರೆಗೆ ರಾಷ್ಟ್ರೀಯ ಸದ್ಭಾವನಾ ರಾಯಭಾರಿಯಾಗಿ ಮುಂದುವರೆಸಲಾಗಿದೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ದಿಯಾ ಮಿರ್ಜಾ ಅವರನ್ನು ಇನ್ನೂ ಎರಡು ವರ್ಷಗಳ ಕಾಲ ಮುಂದುವರೆಸಿದೆ. ಯುನೈಟೆಡ್ ನೇಷನ್ಸ್ ಸಸ್ಟೈನಬಿಲಿಟಿ ಡೆವಲಪ್ಮೆಂಟ್ ಗೋಲ್ಸ್ ಅಡ್ವೊಕೇಟ್ ಆಗಿರುವ ದಿಯಾ ತಮ್ಮ ಅವದಿ ವಿಸ್ತರಣೆ ಬಗ್ಗೆ ಮಾತನಾಡಿದ್ದು, "ಯುಎನ್‌ಇಪಿ ರಾಯಭಾರಿಯಾಗಿ ಮುಂದುವರಿಯುವ ಅವಕಾಶಕ್ಕಾಗಿ ನಾನು ಕೃತಜ್ಞಳನಾಗಿದ್ದೇನೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದೊಂದಿಗಿನ ನನ್ನ ಒಡನಾಟವು ಉತ್ತಮವಾಗಿದೆ. ಇದರಿಂದ ನಾನು ತುಂಬಾ ಕಲಿತಿದ್ದೇನೆ. ಪರಿಸರದ ಜೊತೆ ಕಾರ್ಯನಿರ್ವಹಿಸಲು, ವನ್ಯಜೀವಿಗಳನ್ನು ರಕ್ಷಿಸಲು, ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳಲು ನಾವು ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ನಟಿ ದಿಯಾ ಹೇಳಿದ್ದಾರೆ.

ದಿಯಾ ಕೆಲಸದ ಬಗ್ಗೆ ಮಾತನಾಡಿರುವ ಏಷ್ಯಾ ಮತ್ತು ಪೆಸಿಫಿಕ್‌ನ ಪ್ರಾದೇಶಿಕ ನಿರ್ದೇಶಕ ಮತ್ತು ಪ್ರತಿನಿಧಿ ಡೆಚೆನ್ ತ್ಸೆರಿಂಗ್, 2017ರಿಂದ ಇವರ ಕಾರ್ಯ ಮೌಲ್ಯಯುತವಾಗಿದೆ ಎಂದು ಹೊಗಳಿದ್ದಾರೆ. ದಿಯಾ ಅವರು ತಮ್ಮ ಮೊದಲ ಅವಧಿಯಲ್ಲಿ ನಡೆಸಿದ ಪ್ಲಾಸ್ಟಿಕ್​​​ನಿಂದ ಆಗುವ ಮಾಲಿನ್ಯವನ್ನು ತೊಲಗಿಸಿ ಅಭಿಯಾನವು, ನರೇಂದ್ರ ಮೋದಿಯ ಪ್ಲಾಸ್ಟಿಕ್​​ ಮುಕ್ತ ಭಾರತದ ಕರೆಗೆ ಮುಖ್ಯ ಪಾತ್ರವಹಿಸಿದೆ ಎಂದು ಡೆಚೆನ್ ತ್ಸೆರಿಂಗ್ ತಿಳಿಸಿದ್ದಾರೆ.

ABOUT THE AUTHOR

...view details