ಬಾಲಿವುಡ್ನಲ್ಲಿ ವರುಣ್ ಧವನ್-ನತಾಶ ದಲಾಲ್, ಪ್ರಿಯಾಂಕಾ ಶರ್ಮಾ-ಶಾಜಾ ಮೊರಾನಿ ಮದುವೆ ನಂತ್ರ ಮತ್ತೊಂದು ಗಟ್ಟಿಮೇಳದ ಸದ್ದು ಮೊಳಗಲಿದೆ. ಅರೇ.. ಯಾರಿದು ಮತ್ತೊಂದು ಜೋಡಿ ಅಂದ್ರಾ..? ಅವರೇ ನಟಿ ದಿಯಾ ಮಿರ್ಜಾ ಮತ್ತು ಬಿಸಿನೆಸ್ ಮ್ಯಾನ್ ವೈಭವ್ ರೇಖಿ.
ಇದೇ ಫೆ. 15ರಂದು ಈ ಜೋಡಿಯ ಮದುವೆಯಾಗುತ್ತಿದ್ದು, ಕೇವಲ ಆಪ್ತರು ಮತ್ತು ಕುಟುಂಬದವರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರಂತೆ. ಈ ಇಬ್ಬರ ಮದುವೆ ಬಗ್ಗೆ ಈಗಗಲೇ ಹಲವು ರೂಮರ್ಗಳು ಹರಿದಾಡುತ್ತಿವೆ. ಆದ್ರೆ ತಮ್ಮ ಮದುವೆ ಬಗ್ಗೆ ನಟಿಯಾಗಲಿ, ವೈಭವ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ.