ಕರ್ನಾಟಕ

karnataka

ETV Bharat / sitara

ಪತ್ನಿ ಜೊತೆ ಧ್ರುವ ಸರ್ಜಾ ಬೈಕ್​​​​ ಸವಾರಿ... ವಿಡಿಯೋ - ಬೈಕ್​ ಮೇಲೆ ಧ್ರುವಾ ಮತ್ತು ಪ್ರೇರಣಾ

ಧ್ರುವ ಮತ್ತು ಪ್ರೇರಣಾ ಬೈಕ್​ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇವಸ್ಥನಕ್ಕೆ ತೆರಳಿದ್ದ ಧ್ರುವ, ಕಾರು ಬಿಟ್ಟು ಬೈಕ್​ ಏರಿದ್ದಾರೆ.

Dhurva Sarja Bike Raiding with Wife
ಪತ್ನಿ ಜೊತೆ ಬೈಕ್​ ಸವಾರಿ ಮಾಡಿದ ಧ್ರುವ ಸರಜಾ!

By

Published : Jan 11, 2020, 3:16 PM IST

ಸ್ಯಾಂಡಲ್​​​ವುಡ್​​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗೆ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆ ಆದ ಕೆಲವೇ ದಿನಗಳಲ್ಲಿ ಧ್ರುವ ಸರ್ಜಾ ಪತ್ನಿಗೆ ಎಂಟು ಎಕರೆ ಜಮೀನು ಹಾಗೂ ಐಶಾರಾಮಿ ಕಾರನ್ನು ಕೊಡಿಸುವ ಮೂಲಕ ಸರ್​ಪ್ರೈಸ್​​ ಕೊಟ್ಟಿದ್ರು.

ಇದೀಗ ತಮ್ಮ ತಾತ ಶಕ್ತಿ ಪ್ರಸಾದ್ ಹುಟ್ಟೂರು ಮಧುಗಿರಿ ಹತ್ತಿರ ಇರುವ ಜಕ್ಕೇನಹಳ್ಳಿಗೆ ಭೇಟಿ ನೀಡಿದ್ದಾರೆ. ಕುಟುಂಬದ ಸಂಪ್ರದಾಯದಂತೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆ ಮನೆ ದೇವರು ನರಸಿಂಹಸ್ವಾಮಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

ಪತ್ನಿ ಜೊತೆ ಬೈಕ್​ ಸವಾರಿ ಮಾಡಿದ ಧ್ರುವ ಸರ್ಜಾ

ಈ ಸಂದರ್ಭದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆ ಬೈಕ್​ನಲ್ಲಿ ಪ್ರಯಾಣಿಸಿದ್ದಾರೆ. ದಾರಿ ಮಧ್ಯೆ ಬರುವಾಗ ಧ್ರುವ ಸರ್ಜಾ ಪ್ರೇರಣಾಗೆ ತಮ್ಮ ಹಳ್ಳಿಯ ಸೊಗಡನ್ನ ತೋರಿಸಿದ್ದಾರೆ. ಧ್ರುವ ಸರ್ಜಾರ ಈ ಸಿಂಪ್ಲಿಸಿಟಿ ನೋಡಿದ ಊರ ಮಂದಿ ಬೆರಗಾಗಿದ್ದಾರೆ. ಧ್ರುವಾ ಬೈಕ್​ ರೈಡಿಂಗ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ABOUT THE AUTHOR

...view details