ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಪೊಗರು' ಸಿನಿಮಾ ಫೆಬ್ರವರಿ 19 ರಂದು ಬಿಡುಗಡೆಯಾಗಿದೆ. ಮಿಶ್ರ ಪ್ರತಿಕ್ರಿಯೆ ಇದ್ದರೂ ಸಿನಿಮಾ ಇದುವರೆಗೂ 45 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಇಂದು ನಡೆದ 'ಪೊಗರು' ಯಶಸ್ವಿ ಪ್ರೆಸ್ಮೀಟ್ನಲ್ಲಿ ಧ್ರುವ ಸರ್ಜಾ ಚಿತ್ರದ ವಿವಾದದ ಬಗ್ಗೆ ಮಾತನಾಡಿದ್ದಾರೆ.
'ಪೊಗರು' ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಧ್ರುವ ಸರ್ಜಾ..!
ಇಷ್ಟು ದಿನಗಳ ಕಾಲ ಮೌನವಾಗಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಮೌನ ಮುರಿದಿದ್ದಾರೆ. ಸಿನಿಮಾದಲ್ಲಿನ ದೃಶ್ಯಗಳನ್ನು ಡಿಲೀಟ್ ಮಾಡಿದ ನಂತರ ಮಾತನಾಡಬೇಕು ಎಂದುಕೊಂಡಿದ್ದೆ. ಸಿನಿಮಾಗೆ ಹೊಸ ದೃಶ್ಯಗಳನ್ನು ಸೇರಿಸಿದ್ದೇವೆ. ನಮ್ಮಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮಿಸಿ ಎಂದು ಧ್ರುವ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ:ಬಹಳ ದಿನಗಳ ನಂತರ ಆನ್ಸ್ಕ್ರೀನ್ ಅಪ್ಪನನ್ನು ಭೇಟಿಯಾದ ಪುಟ್ಟಗೌರಿ
"ನಾವು ಸಿನಿಮಾ ಮಾಡುವುದೇ ಜನರಿಗಾಗಿ. ಒಂದು ವೇಳೆ ಆ ಸಿನಿಮಾದಿಂದ ಯಾರಿಗಾದರೂ ನೋವಾಗಿದ್ದರೆ ನಾವು ಆ ದೃಶ್ಯಗಳನ್ನು ಡಿಲೀಟ್ ಮಾಡಲು ರೆಡಿ ಇರಬೇಕು. ಚಿತ್ರೀಕರಣ ಮಾಡುವಾಗ ಒಂದೊಂದು ಶಾಟ್ಗೆ ಹೆಚ್ಚುವರಿ ಚಿತ್ರೀಕರಣ ಮಾಡಿದ್ದೆವು. ಇದೀಗ ಕೆಲವೊಂದು ಸೀನ್ಗಳನ್ನು ಡಿಲೀಟ್ ಮಾಡಿರುವುದರಿಂದ 8 ನಿಮಿಷ ಅವಧಿ ಕಡಿಮೆ ಆಗಿದೆ. ಇದಕ್ಕೆ ಬೇರೆ ದೃಶ್ಯಗಳನ್ನು ಸೇರಿಸಲಿದ್ದೇವೆ. ಕೆಲಸ ಮಾಡಿದ ನಂತರ ಮಾತನಾಡೋಣ ಎಂದುಕೊಂಡಿದ್ದೆ. ಆ ಕಾರಣದಿಂದ ಇಷ್ಟು ದಿನ ಸುಮ್ಮನಿದ್ದೆ. ಯಾರಿಗೂ ಉದ್ದೇಶಪೂರ್ವಕವಾಗಿ ನೋವು ಮಾಡಿಲ್ಲ. ಒಂದು ವೇಳೆ ಸಿನಿಮಾದಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮಿಸಿ, ನಾನು ನಿಮ್ಮ ಮನೆ ಮಗ" ಎಂದು ಧ್ರುವ ಸರ್ಜಾ ಕೈ ಮುಗಿದು ಕ್ಷಮೆ ಕೇಳಿದ್ದಾರೆ.