ಕರ್ನಾಟಕ

karnataka

ETV Bharat / sitara

ಮುಂದೇನು ಅಂತಾ ಯೋಚಿಸುವುದಕ್ಕೇ ಒಂದು ವರ್ಷ ತೆಗೆದುಕೊಂಡರು ಧ್ರುವ.. - ಧ್ರುವ ಸರ್ಜಾ

ಧ್ರುವ ಸರ್ಜಾ`ಖಂದರೀಗ' ಎಂಬ ಚಿತ್ರದ ಕನ್ನಡ ರೀಮೇಕ್‍ನಲ್ಲಿ ನಟಿಸುತ್ತಿದ್ದಾರೆ ಎಂದು ಘೋಷಣೆಯಾಯಿತು. ಚಿತ್ರದ ಮುಹೂರ್ತವೂ ಆಗಿತ್ತು. ಕೊನೆಗೆ ರೀಮೇಕ್ ಬೇಡ, ಸ್ವಮೇಕ್ ಇರಲಿ ಎಂದು ಅವರು `ಪೊಗರು' ಕಥೆಯನ್ನು ಒಪ್ಪುವುದಕ್ಕೇ ಒಂದು ವರ್ಷ ಆಗಿಹೋಯಿತು..

ಮುಂದೇನು ಅಂತ ಯೋಚಿಸುವುದಕ್ಕೇ ಒಂದು ವರ್ಷ ತೆಗೆದುಕೊಂಡರು ಧ್ರುವ
ಮುಂದೇನು ಅಂತ ಯೋಚಿಸುವುದಕ್ಕೇ ಒಂದು ವರ್ಷ ತೆಗೆದುಕೊಂಡರು ಧ್ರುವ

By

Published : Jan 19, 2021, 10:33 PM IST

'ಪೊಗರು' ಚಿತ್ರವು ಫೆಬ್ರವರಿ 19ಕ್ಕೆ ಬಿಡುಗಡೆಯಾಗುತ್ತಿರುವ ವಿಷಯ ಧ್ರುವ ಅಭಿಮಾನಿಗಳಲ್ಲಿ ಸಾಕಷ್ಟು ಸಂತಸ ಮೂಡಿಸಿದೆ. ಕಾರಣ, ಧ್ರುವ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಮೂರೂವರೆ ವರ್ಷಗಳೇ ಆಗಿವೆ. ಧ್ರುವ ಅಭಿನಯದ ಕೊನೆಯ ಚಿತ್ರ ಅಂದರೆ ಅದು 'ಭರ್ಜರಿ'. 2017ರ ಸೆಪ್ಟೆಂಬರ್‍ನಲ್ಲಿ ಆ ಚಿತ್ರ ಬಿಡುಗಡೆಯಾಗಿತ್ತು. ನಂತರ ಧ್ರುವ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಹಾಗಾಗಿ, ಸಹಜವಾಗಿಯೇ ಧ್ರುವ ಅಭಿಮಾನಿಗಳು ಖುಷಿಗೊಂಡಿದ್ದಾರೆ.

ಇಷ್ಟಕ್ಕೂ ಧ್ರುವ ಇಷ್ಟೊಂದು ಸಮಯ ತೆಗೆದುಕೊಳ್ಳುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. `ಭರ್ಜರಿ' ಯಶಸ್ವಿಯಾದ ನಂತರ ಮುಂದೇನು ಮಾಡಬೇಕು ಎಂಬ ಗೊಂದಲಕ್ಕೆ ಬಿದ್ದರು ಧ್ರುವ. ಯಾಕೆಂದರೆ, ಅವರ ಮೊದಲ ಮೂರು ಚಿತ್ರಗಳು ಹಿಟ್ ಆಗುವ ಮೂಲಕ ಅವರು`ಹ್ಯಾಟ್ರಿಕ್ ಹೀರೋ' ಆಗಿದ್ದರು. ನಾಲ್ಕನೆಯ ಚಿತ್ರ ಸಹ ಚೆನ್ನಾಗಿ ಮೂಡಿ ಬರಬೇಕು ಎಂಬ ಕಾರಣಕ್ಕೆ ಅವರು ಸೂಕ್ತ ಕಥೆಗಾಗಿ ಹುಡುಕಾಟ ನಡೆಸಿದರು.

ಒಂದು ಹಂತದಲ್ಲಿ `ಖಂದರೀಗ' ಎಂಬ ಚಿತ್ರದ ಕನ್ನಡ ರೀಮೇಕ್‍ನಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಘೋಷಣೆಯಾಯಿತು. ಚಿತ್ರದ ಮುಹೂರ್ತವೂ ಆಗಿತ್ತು. ಕೊನೆಗೆ ರೀಮೇಕ್ ಬೇಡ, ಸ್ವಮೇಕ್ ಇರಲಿ ಎಂದು ಅವರು`ಪೊಗರು' ಕಥೆಯನ್ನು ಒಪ್ಪುವುದಕ್ಕೇ ಒಂದು ವರ್ಷ ಆಗಿ ಹೋಯಿತು.

ಚಿತ್ರಕ್ಕಾಗಿ ಧ್ರುವ ತಮ್ಮ ದೇಹವನ್ನು ಹುರಿಗೊಳಿಸಿಕೊಳ್ಳಬೇಕಿದ್ದರಿಂದ, ಅದಕ್ಕೆ ಇನ್ನೊಂದು ಆರು ತಿಂಗಳಾಯಿತು. ಇನ್ನು, ಚಿತ್ರೀಕರಣಕ್ಕೆ ಇನ್ನಷ್ಟು ಸಮಯ ಹಿಡಿಯಿತು. ಕಳೆದ ವರ್ಷದ ಮಾರ್ಚ್ ಹೊತ್ತಿಗೆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಇನ್ನೊಂದು ಹಾಡಿನ ಚಿತ್ರೀಕರಣ ಮುಗಿದ್ರೆ ಎಲ್ಲಾ ಮುಗಿದಂತೆ ಎನ್ನುವಷ್ಟರಲ್ಲೇ ಲಾಕ್‍ಡೌನ್ ಘೋಷಣೆಯಾಯಿತು. ಅದೆಲ್ಲಾ ಮುಗಿದು, ಬಾಕಿ ಉಳಿದಿದ್ದ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡವು ಇದೀಗ ಚಿತ್ರವನ್ನು ಫೆಬ್ರವರರಿ 19ಕ್ಕೆ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

ಅಲ್ಲಿಗೆ, ತಮ್ಮ ಮೆಚ್ಚಿನ ನಟನ ಸಿನಿಮಾಗಾಗಿ ಕಳೆದ ಮೂರೂವರೆ ವರ್ಷಗಳಿಂದ ಕಾಯುತ್ತಿದ್ದ ಧ್ರುವ ಅಭಿಮಾನಿಗಳು, ಬಹಳ ಖುಷಿಯಾಗಿದ್ದು, ಚಿತ್ರದ ಬಿಡುಗಡೆಗೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ABOUT THE AUTHOR

...view details