ಧ್ರುವಾ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸ್ಯಾಂಡಲ್ವುಡ್ನ ಬಹುನಿರೀಕ್ಷಿತ 'ಪೊಗರು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ನಲ್ಲಿ ಧ್ರುವಾ ಸರ್ಜಾ ಡೈಲಾಗ್ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದೆ.
'ಪೊಗರು' ಟ್ರೈಲರ್ ಬಿಡುಗಡೆ... ವೈರಲ್ ಆಗುತ್ತಿದೆ ಧ್ರುವಾ ಡೈಲಾಗ್! - ಪೊಗರು ಟ್ರೈಲರ್ ಬಿಡುಗಡೆ
'ಪೊಗರು' ಚಿತ್ರತಂಡ ಇಂದು ಟ್ರೈಲರ್ ಬಿಡುಗಡೆ ಮಾಡಿದ್ದು, 'ಗೂಳಿ ಸೈಲೆಂಟ್ ಆಗಿದೆ ಅಂತ ಗಾಂಚಲಿ ಮಾಡೋಕೆ ಬಂದ್ರೆ ಗುದ್ದೋ ಏಟಿಗೆ ಗೂಗಲ್ನಲ್ಲಿ ಹುಡುಕಿದ್ರೂ ಟ್ರೀಟ್ಮೆಂಟ್ ಸಿಗಲ್ಲ' ಎಂಬ ಡೈಲಾಗ್ ಸಖತ್ ವೈರಲ್ ಆಗುತ್ತಿದೆ.

ಚಿತ್ರದಲ್ಲಿ ಧ್ರುವಾ ಸರ್ಜಾ ಎರಡು ಶೇಡ್ಗಳಲ್ಲಿ ನಟಿಸಿದ್ದಾರೆ. ಆದರೆ 3:40 ನಿಮಿಷ ಅವಧಿಯ ಈ ಟ್ರೈಲರ್ನಲ್ಲಿ ಧ್ರುವಾ ಸರ್ಜಾ ಅವರ ರಫ್ ಅಂಡ್ ಟಫ್ ಕ್ಯಾರೆಕ್ಟರ್ ತೋರಿಸಲಾಗಿದೆ. ಟ್ರೈಲರ್ನ ಡೈಲಾಗ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು, ಯೂಟ್ಯೂಬ್ನಲ್ಲಿ ಟ್ರೆಂಡ್ ಆಗುತ್ತಿದೆ. 'ಗೂಳಿ ಸೈಲೆಂಟ್ ಆಗಿದೆ ಅಂತ ಗಾಂಚಲಿ ಮಾಡೋಕೆ ಬಂದ್ರೆ ಗುದ್ದೋ ಏಟಿಗೆ ಗೂಗಲ್ನಲ್ಲಿ ಹುಡುಕುದ್ರೂ ಟ್ರೀಟ್ಮೆಂಟ್ ಸಿಗಲ್ಲ' ಎಂಬ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಶ್ರೀ ಜಗದ್ಗುರು ಮೂವೀಸ್ ಬ್ಯಾನರ್ ಅಡಿ ಚಿತ್ರವನ್ನು ಬಿ.ಕೆ.ಗಂಗಾಧರ್ ನಿರ್ಮಿಸಿದ್ದರೆ, ನಂದಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದು, ಶೀಘ್ರದಲ್ಲೇ ಮತ್ತೊಂದು ಟ್ರೈಲರ್ ಬಿಡುಗಡೆಯಾಗಲಿದೆ.