ಕರ್ನಾಟಕ

karnataka

ETV Bharat / sitara

ಧ್ರುವ ಸರ್ಜಾ ಈಗ 'ದುಬಾರಿ'...ಐ ಆ್ಯಮ್ ವೆರಿ ಕಾಸ್ಟ್ಲಿ ಎನ್ನುತ್ತಿದ್ದಾರೆ ಪೊಗರು ಹುಡುಗ..! - Dhruva Sarja is costly now

ನಂದಕಿಶೋರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ದುಬಾರಿ' ಎಂದು ಹೆಸರಿಡಲಾಗಿದ್ದು ಇಂದು ಮುಂಜಾನೆ ಬೆಂಗಳೂರು ದೇವಸ್ಥಾನವೊಂದರಲ್ಲಿ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿದೆ.

Dhruva Sarja new movie
ಧ್ರುವ ಸರ್ಜಾ

By

Published : Nov 6, 2020, 8:50 AM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಲ್ಲಿವರೆಗೂ ನಟಿಸಿರುವುದು 5 ಚಿತ್ರಗಳಲ್ಲಾದರೂ ಒಂದು ಚಿತ್ರಕ್ಕೆ ಸುಮಾರು 5 ಕೋಟಿ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಿರುವುದು ತಿಳಿದ ವಿಚಾರ. ಇದೀಗ ಈ ಪೊಗರು ಹುಡುಗ ಮತ್ತಷ್ಟು 'ದುಬಾರಿ'ಯಾಗಿದ್ದಾರೆ.

ಧ್ರುವ ಸರ್ಜಾ

ಇದೇನಪ್ಪಾ ಧ್ರುವ ಸರ್ಜಾ ಮತ್ತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ್ರಾ ಎಂದುಕೊಳ್ಳಬೇಡಿ. 'ಪೊಗರು' ಚಿತ್ರದ ನಂತರ ನಂದಕಿಶೋರ್ ನಿರ್ದೇಶನದ ಹೊಸ ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಈ ಸುದ್ದಿ ಕನ್ಫರ್ಮ್ ಆಗಿದೆ. ಈ ಚಿತ್ರಕ್ಕೆ 'ದುಬಾರಿ' ಎಂದು ಹೆಸರಿಡಲಾಗಿದೆ. ದುಬಾರಿ ಚಿತ್ರಕ್ಕೆ 'ಐ ಆ್ಯಮ್ ವೆರಿ ಕಾಸ್ಟ್ಲಿ' ಎಂದು ಉಪಶೀರ್ಷಿಕೆಯನ್ನೂ ಇಡಲಾಗಿದೆ. ಈ ಚಿತ್ರಕ್ಕೆ ನಂದಕಿಶೋರ್ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರಂತೆ.

'ದುಬಾರಿ' ಪೋಸ್ಟರ್

'ದುಬಾರಿ' ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡುತ್ತಿದ್ದು, ಸದ್ಯದಲ್ಲೇ ಸಂಗೀತ ನಿರ್ದೇಶಕರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಪೂಜೆಯಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ವಿಜಯದಶಮಿಯಂದು ಚಿತ್ರದ ಮುಹೂರ್ತವಾಗಿ, ನವೆಂಬರ್ 6ರಂದು ಚಿತ್ರದ ಶೀರ್ಷಿಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿಜಯದಶಮಿಯಂದು ನಡೆಯಬೇಕಿದ್ದ ಮುಹೂರ್ತವನ್ನು ನವೆಂಬರ್ 6 ಮುಂದೂಡಲಾಗಿತ್ತು. ಅದರಂತೆ ಶುಕ್ರವಾರ, ಅಂದರೆ ಇಂದು ಬಸವೇಶ್ವರ ನಗರದ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

ABOUT THE AUTHOR

...view details