ಕೊರೊನಾ ಹೊಡೆತಕ್ಕೆ ತತ್ತರಿಸಿದ ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಶಕ್ತಿ ತುಂಬಲು, ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರ ಫೆಬ್ರವರಿ 19 ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಅನುಭವವನ್ನ ಹಂಚಿಕೊಳ್ಳಲು ಪೊಗರು ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಧ್ರುವ ಸರ್ಜಾ ಮೂರು ಶೇಡ್ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸ್ಕೂಲ್ ಬಾಯ್ ಆಗಿ ನಟಿಸಿದ್ದಾರೆ. ಅದರಲ್ಲೂ 10ನೇ ತರಗತಿ ಹುಡುಗನ ಪಾತ್ರ. ಈ ಪಾತ್ರಕ್ಕಾಗಿಯೇ ಅವರು ಮೂರು ವರ್ಷ ಸಮಯ ತೆಗೆದುಕೊಂಡಿದ್ದಂತೆ. ಜತೆಗೆ ಅದಕ್ಕಾಗಿಯೇ ಮೂರು ವರ್ಷ ಯಾವುದೇ ಸಿನಿಮಾ ಒಪ್ಪುಕೊಂಡಿಲ್ಲವಂತೆ. ಮೊದಲು ಅವರು 65ಕೆಜಿಗೆ ದೇಹದ ತೂಕ ಇಳಿಸಿಕೊಂಡಿದ್ದಾರೆ. ಆ ಮೇಲೆ 120 ಕೆಜಿ ಆದರಂತೆ. ಹಾಗಾಗಿಯೇ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ.ಅದೇನೆ ಇರಲಿ, ಧ್ರುವ ಅವರ ಈ ಶ್ರದ್ಧೆಯನ್ನು ಇಡೀ ಚಿತ್ರ ತಂಡ ಕೊಂಡಾಡಿದೆ. ಇನ್ನು ಧ್ರುವ ಸರ್ಜಾ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಆದರೆ ಕನ್ನಡದ ಹೀರೋಯಿನ್ ಆಗಿ ತಮ್ಮ ಚಿತ್ರದ ಪ್ರೆಸ್ಮೀಟ್ಗೆ ಗೈರು ಆಗಿದ್ರು.