ಕಳೆದ ಎರಡು ವರ್ಷಗಳಿಂದ ಪೊಗರು ಸಿನಿಮಾದಲ್ಲೇ ಕಳೆದು ಹೋಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೊನೆಗೂ ಮತ್ತೊಂದು ಹೊಸ ಚಿತ್ರಕ್ಕೆ ರೆಡಿಯಾಗ್ತಿದ್ದಾರೆ.
ಪೊಗರು ಚಿತ್ರದ ಶೂಟಿಂಗ್ ನಡುವೆಯೇ ಹೊಸ ಸಿನಿಮಾಗೆ ರೆಡಿಯಾಗಿರುವ ಧ್ರುವಾ ಸರ್ಜಾ ಮತ್ತೆ ನಂದ ಕಿಶೋರ್ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಮಾಡುವ ಸಿದ್ಧತೆಯಲ್ಲಿದ್ದಾರೆ.
ಇನ್ನೂ ಈ ಚಿತ್ರ ಸಂಕ್ರಾಂತಿ ಹಬ್ಬಕ್ಕೆ ಸೆಟ್ಟೇರಲಿದ್ದು, ಸಿನಿಮಾಗೆ " ದರ್ಬಾರ್" ಅಂತಾ ಟೈಟಲ್ ಇಡೋ ಸಾಧ್ಯತೆಯಿದೆ. ಸದ್ಯ ಪೊಗರು ಸಿನಿಮಾದ ಬಹುತೇಕ ಕೆಲಸ ಕಂಪ್ಲೀಟ್ ಆಗಿದ್ದು, ಕೇವಲ 15 ದಿನಗಳ ಶೂಟಿಂಗ್ ಮಾತ್ರ ಬಾಕಿಯಿದೆ.
‘ಪೊಗರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರಲಿರುವ ಧ್ರುವ ಸರ್ಜಾ, ಎರಡು ತಿಂಗಳು ಫ್ಯಾಮಿಲಿ ಜೊತೆ ಇದ್ದು, ಜನವರಿಯಲ್ಲಿ "ದರ್ಬಾರ್" ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.