ಕರ್ನಾಟಕ

karnataka

ETV Bharat / sitara

ದೈತ್ಯ ದೇಹಿಯ ಜೊತೆ ಆಕ್ಷನ್ ಪ್ರಿನ್ಸ್ 'ಪೊಗರಿ'ನ ಕಾದಾಟ! - Dhruva sarja fight in Pogaru

ಫ್ರಾನ್ಸ್ ಮೂಲದ ಮೋರ್ಗನ್ ಆಸ್ಟೆ ವಿಶ್ವದಲ್ಲಿಯೇ ಉನ್ನತ ಬಾಡಿ ಬಿಲ್ಡರ್ ಗಳಲ್ಲಿ ಒಬ್ಬರು. ಇದೀಗ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಭಾರತೀಯ ಸಿಲ್ವರ್​ ಸ್ಕ್ರೀನ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಪೊಗರು

By

Published : Aug 27, 2019, 4:52 AM IST

ಕೆಲ ದಿನಗಳ ಹಿಂದೆಯಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಬಾಡಿ ಬಿಲ್ಡರ್​ ಮೋರ್ಗನ್​ ಆಸ್ಟೆ ಅವರ ಜೊತೆ ವರ್ಕೌಟ್ ಮಾಡ್ತಿರೋ ವಿಡಿಯೋ ಅಪ್‌ಲೋಡ್ ಮಾಡಿ, ಮತ್ತಷ್ಟು ಸರ್‌ಪ್ರೈಸ್ ಇರಲಿವೆ ಅಂತಾ ಹೇಳಿದ್ದರು.

ಅದೇ ರೀತಿ ಈಗ ‘ಪೊಗರು’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್​ನ ವಿಡಿಯೋ ವೈರಲ್‌ ಆಗಿದ್ದು ಕೈಮ್ಯಾಕ್ಸ್ ಸೀನ್‌ನಲ್ಲಿ ಹಾಲಿವುಡ್‌ನ ಘಟಾನುಘಟಿ ದೈತ್ಯ ನಟರು ಪಾಲ್ಗೊಂಡಿದ್ದಾರೆ. ಅದರಲ್ಲೂ ಡಬ್ಲ್ಯೂಡಬ್ಲ್ಯೂಇ ಫೈಟರ್ಸ್ ಮೋರ್ಗನ್ ಆಸ್ಟೆ, ಕೈಗ್ರೀನ್, ಜಾನ್ ಲುಕಾಸ್, ಜೋಸ್ಥೆಟಿಕ್ಸ್ ಜೊತೆ ಧ್ರುವ ಸರ್ಜಾ ಪೊಗರು ಚಿತ್ರದ ಕ್ಲೈಮ್ಯಾಕ್ಸ್ ಶೂಟ್​ನಲ್ಲಿ ಕಾದಾಟ ನಡೆಸಿದ್ದಾರೆ .

‘ಪೊಗರು’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್

ಫ್ರಾನ್ಸ್ ಮೂಲದ ಆಸ್ಟೆ ವಿಶ್ವದಲ್ಲಿಯೇ ಉನ್ನತ ಬಾಡಿ ಬಿಲ್ಡರ್​ಗಳಲ್ಲಿ ಒಬ್ಬರು. ಇದೀಗ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಭಾರತೀಯ ಸಿಲ್ವರ್​ ಸ್ಕ್ರೀನ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಹೈದರಾಬಾದ್‌ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿರೋ ಕ್ಲೈಮ್ಯಾಕ್ಸ್ ಫೈಟಿಂಗ್ ಚಿತ್ರೀಕರಣದ ವೇಳೆ ಇಂಟರ್‌ನ್ಯಾಷನಲ್ ಬಾಡಿ ಬಿಲ್ಡರ್ ಮೋರ್ಗನ್ ಆಸ್ಟೆ ಹುಟ್ಟುಹಬ್ಬವನ್ನ ಆಚರಿಸಲಾಗಿದೆ. ಅದು ಸರ್‌ಪ್ರೈಸ್ ಆಗಿ ಅನ್ನೋದೇ ವಿಶೇಷ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರೋ ಮೋರ್ಗನ್ ಆಸ್ಟೆ, ಸರ್‌ಪ್ರೈಸ್ ಕೇಕ್ ಕಟಿಂಗ್‌ಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಕೈಮ್ಯಾಕ್ಸ್ ಸೀನ್​ನ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಪೊಗರು ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್​ ಕಟ್​ ಹೇಳಿದ್ದು, ಬರೋಬ್ಬರಿ 2 ವರ್ಷಗಳಿಂದ ಪೊಗರು ಚಿತ್ರ ಶೂಟಿಂಗ್ ನಡೆಯುತ್ತಿದೆ. ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದು ಈ ವರ್ಷದ ಅಂತ್ಯಕ್ಕೆ ‘ಪೊಗರು’ ತೋರಿಸಲು ಬಹದ್ದೂರ್ ರೆಡಿಯಾಗ್ತಿದ್ದಾರಂತೆ.

ABOUT THE AUTHOR

...view details