ಕನ್ನಡ ಚಿತ್ರರಂಗದಲ್ಲಿ ರಾಮ-ಲಕ್ಷ್ಮಣನಂತೆ ಇದ್ದ ಸ್ಟಾರ್ ಸೆಲಬ್ರಿಟಿಗಳು ಅಂದ್ರೆ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಬಹುಶಃ ಜೇನಿನಗೂಡಿನಂತೆ ಇದ್ದಈ ಕುಟುಂಬವನ್ನು ನೋಡಿ ಆ ವಿಧಿಗೂ ಸಹಿಸಿಕೊಳ್ಳಲಾಗಲಿಲ್ಲ ಎನ್ನಿಸುತ್ತದೆ. ಜೂನ್ 7 ರಂದು ಈ ಸುಂದರ ಕುಟುಂಬದಿಂದ ಚಿರಂಜೀವಿ ಸರ್ಜಾ ಅವರನ್ನು ದೂರ ಮಾಡಿತು.
ಅಪ್ಪ-ಮಗನ ಬೈಸಿಪ್ಸ್ ಪ್ರದರ್ಶನ ಅಣ್ಣನ ಅಗಲಿಗೆಯಿಂದ ದು:ಖದಲ್ಲಿರುವ ಧ್ರುವಾಗೆ ಈಗ ತಂದೆ ವಿಜಯ್ ಕುಮಾರ್ ಅವರೇ ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ಇಂದಿಗೆ ಚಿರಂಜೀವಿ ಸರ್ಜಾ ಅಗಲಿ 2 ತಿಂಗಳು ತುಂಬಿದ್ದು ಕುಟುಂಬ ಚಿರು ಸಮಾಧಿಗೆ ಪೂಜೆ ಸಲ್ಲಿಸಿದೆ. ಈ ನೋವನ್ನು ಮರೆಸುವ ಉದ್ದೇಶದಿಂದ ಚಿರು ಆಪ್ತರು ಧ್ರುವ ಸರ್ಜಾ ಹಾಗೂ ತಂದೆ ವಿಜಯ್ ಕುಮಾರ್ ಇಬ್ಬರಿಗೂ ಒಂದು ಸವಾಲು ಹಾಕಿದ್ದಾರೆ.
ವಿಜಯ್ ಕುಮಾರ್, ಧ್ರುವ ಸರ್ಜಾ ಧ್ರುವ ಸರ್ಜಾ ಸ್ಟಾಂಗೋ ವಿಜಯ್ ಕುಮಾರ್ ಸ್ಟ್ರಾಂಗೋ ಎಂಬುದನ್ನು ತಿಳಿಯಲು ಇಬ್ಬರೂ ಬೈಸಿಪ್ಸ್ ತೋರಿಸಬೇಕು ಎಂದು ಸ್ನೇಹಿತರು ಕೇಳಿದ್ದಾರೆ. ಆಗ ಧ್ರುವ ಹಾಗೂ ವಿಜಯ್ ಕುಮಾರ್ ಇಬ್ಬರೂ ಬೈಸಿಪ್ಸ್ ತೋರಿಸಿದ್ದಾರೆ. ಇಬ್ಬರೂ ಬೈಸಿಪ್ಸ್ ತೋರುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ದೊರೆತಿದೆ.
ಧ್ರುವ ಸರ್ಜಾ, ವಿಜಯ್ಕುಮಾರ್ ಕೊರೊನಾ ಅಟ್ಯಾಕ್ ಆದ ನಂತರ ಧ್ರುವ ಸರ್ಜಾ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ನಂತರ ತಪ್ಪದೆ ವರ್ಕೌಟ್ ಮಾಡುತ್ತಿದ್ದಾರೆ. ವಿಜಯ್ ಕುಮಾರ್ ಕೂಡಾ ಬಾಡಿ ಬಿಲ್ಡ್ ಮಾಡುವ ಮೂಲಕ ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಒಟ್ಟಿನಲ್ಲಿ ನೋವು ಮರೆತು ಈ ಕುಟುಂಬ ನಗುತ್ತಾ ಇರಬೇಕು ಎಂಬುದೇ ಅಭಿಮಾನಿಗಳ ಆಸೆ.