ಕರ್ನಾಟಕ

karnataka

ETV Bharat / sitara

ನನ್ನ ಜೊತೆ ಧ್ರುವ ಯಾವತ್ತೂ ಸ್ಟಾರ್​​​ ರೀತಿ ವರ್ತಿಸಿಲ್ಲ ಎಂದ ಭರ್ಜರಿ ಹುಡುಗನ ಮಡದಿ - ಅಭಿಮಾನಿಗಳಿಗಾಗಿ ಆರತಕ್ಷತೆ

ನನಗೆ ತುಂಬಾ ಖುಷಿಯಾಗುತ್ತಿದೆ, ಎಲ್ಲ ಅಭಿಮಾನಿಗಳ ಆಶಿರ್ವಾದ ನಮಗೆ ಬೇಕು, ಬಿಸಿಲಲ್ಲಿ ನಿಂತು ನಮಗೆ ಅಭಿನಂದನೆ ಸಲ್ಲಿಸಲು ಕಾಯುತ್ತಿದ್ದಾರೆ. ದೂರದ ಊರುಗಳಿಂದ ಸಾಕಷ್ಟು ಅಭಿಮಾನಿಗಳು ನಮ್ಮನ್ನ ಹರಸೋಕೆ ಬಂದಿದ್ದಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಚಿರರುಣಿ ಎಂದು ತುಂಬು ಹೃದಯದಿಂದ ಧ್ರುವ ಸರ್ಜಾ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

ನನ್ನ ಜೊತೆ ಧ್ರುವ ಯಾವತ್ತೂ ಸ್ಟಾರ್​​​ ರೀತಿ ವರ್ತಿಸಿಲ್ಲ ಎಂದ ಭರ್ಜರಿ ಹುಡುಗನ ಮಡದಿ

By

Published : Nov 25, 2019, 8:19 PM IST

ಅಭಿಮಾನಿಗಳ ಅಭಿಮಾನಕ್ಕೆ ನಾವು ಸದಾಚಿರರುಣಿಗಳಾಗಿರ್ತೀವಿ ಎಂದು ಅದ್ದೂರಿ ಹುಡುಗನ ಬಾಳ ಸಂಗಾತಿಯಾಗಿ ಬಂದ ಪ್ರೇರಣಾ ಹೇಳಿದ್ದಾರೆ. ಅಭಿಮಾನಿಗಳಿಗಾಗಿ ಇಂದು ಆರತಕ್ಷತೆ ಮಾಡಿಕೊಂಡ ಧ್ರುವ-ಪ್ರೇರಣಾ ದಂಪತಿಗಳು ನಂತರ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ್ರು.

ನನಗೆ ತುಂಬಾ ಖುಷಿಯಾಗುತ್ತಿದೆ, ಎಲ್ಲ ಅಭಿಮಾನಿಗಳ ಆಶೀರ್ವಾದ ನಮಗೆ ಬೇಕು, ಬಿಸಿಲಲ್ಲಿ ನಿಂತು ನಮಗೆ ಅಭಿನಂದನೆ ಸಲ್ಲಿಸಲು ಕಾಯುತ್ತಿದ್ದಾರೆ. ದೂರದ ಊರುಗಳಿಂದ ಸಾಕಷ್ಟು ಅಭಿಮಾನಿಗಳು ನಮ್ಮನ್ನ ಹರಸೋಕೆ ಬಂದಿದ್ದಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಚಿರರುಣಿ ಎಂದು ತುಂಬು ಹೃದಯದಿಂದ ಧ್ರುವ ಸರ್ಜಾ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

ಧ್ರುವ ಸರ್ಜಾ ಪ್ರೇರಣಾ ದಂಪತಿ ಸುದ್ದಿಗೋಷ್ಠಿ

ನಂತರ ಮಾತನಾಡಿದ ಪ್ರೇರಣಾ, ನನಗೆ ಒಬ್ಬ ಸ್ಟಾರ್‌ ಪತ್ನಿ ಎಂದು ಅನಿಸುತ್ತಿಲ್ಲ. ಯಾಕಂದ್ರೆ ಸ್ಟಾರ್​​ನ ಮದುವೆ ಆಗಿದ್ರೆ ಆ ರೀತಿ ಅನಿಸುತ್ತಿತ್ತು, ಧ್ರುವ ಯಾವತ್ತು ನನ್ನ ಬಳಿ ಸ್ಟಾರ್ ರೀತಿ ವರ್ತಿಸಿಲ್ಲ. ಮುಂದಿನ ದಿನಗಳಲ್ಲೂ ಆ ರೀತಿ ವರ್ತಿಸಲ್ಲ ಎಂದು ಧ್ರುವ ಸರ್ಜಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇನ್ನು ಧ್ರುವ ಗಡ್ಡದ ಬಗ್ಗೆ ಮಾತನಾಡಿದ ಪ್ರೇರಣಾ, ತುಂಬಾ ದಿನಗಳಿಂದ ಹೀಗೆ ನೋಡಿ ನೋಡಿ ಅಭ್ಯಾಸ ಆಗಿದೆ. ಹಾಗಾಗಿ ನನಗೆ ಏನು ಅನ್ನಿಸುತ್ತಿಲ್ಲಾ. ಅವರು ಹೇಗಿದ್ರು ನನಗೆ ಇಷ್ಟಾನೆ ಅಂತಾ ನಗು ಮುಗದಿಂದಲೇ ಉತ್ತರಿಸಿದ್ರು.

ABOUT THE AUTHOR

...view details