ಕರ್ನಾಟಕ

karnataka

ETV Bharat / sitara

ಅಣ್ಣಾವ್ರ ನಂತರ ಮಾವ ಶಿವರಾಜ್​​ಕುಮಾರ್ ಜಪ‌ ಮಾಡುತ್ತಿರುವ ಧೀರೆನ್ ರಾಮ್​​​​​​​​​​​​​​​ಕುಮಾರ್ - ಆಪರೇಷನ್‌ ಡೈಮಂಡ್​​​ ರಾಕೆಟ್‌

ಕೆಲವು ದಿನಗಳ ಹಿಂದೆ ಡಾ. ರಾಜ್​​ಕುಮಾರ್ ಭಾವಚಿತ್ರ ಇರುವ ಅಂಗಿ ಧರಿಸಿ ಮೊಮ್ಮಗ ಧೀರೆನ್ ರಾಮ್​​ಕುಮಾರ್ ಸುದ್ದಿಯಲ್ಲಿದ್ದರು. ಇದೀಗ ಮಾವ ಶಿವರಾಜ್​ಕುಮಾರ್ ಫೋಟೋಗಳಿರುವ ಶರ್ಟ್ ಧರಿಸುವ ಮೂಲಕ ಮತ್ತೊಂದು ಟ್ರೆಂಡ್​ ಸೃಷ್ಟಿಸಿದ್ದಾರೆ ಧೀರೆನ್​​​.

ಧೀರೆನ್ ರಾಮ್​​​​​​​​​​​​​​​ಕುಮಾರ್

By

Published : Oct 5, 2019, 3:23 PM IST

ಕನ್ನಡ ಚಿತ್ರರಂಗದ ಐಕಾನ್ ಆಗಿ ಕೋಟ್ಯಂತರ ಅಭಿಮಾನಿಗಳ, ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಿರುವ ಮೇರುನಟ‌ ಡಾ. ರಾಜ್ ಕುಮಾರ್ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅಭಿಮಾನಿಗಳು ನಟಸಾರ್ವಭೌಮನ ಹೆಸರನ್ನು ಅಜರಾಮರವಾಗಿರಿಸಲು ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಡಾ. ರಾಜ್​​​​ಗೆ ಸಾಮಾನ್ಯ ಜನರು ಮಾತ್ರವಲ್ಲ ಎಲ್ಲಾ ಸೆಲಬ್ರಿಟಿಗಳು ಕೂಡಾ ಅಭಿಮಾನಿಗಳೇ. ಅದರಲ್ಲಿ ಮೊಮ್ಮಗ, ನಟ ರಾಮ್​​​ಕುಮಾರ್ ಪುತ್ರ ಧೀರೆನ್ ರಾಮ್​​​ಕುಮಾರ್ ಕೂಡಾ ಒಬ್ಬರು. ಅಣ್ಣಾವ್ರ ಫೋಟೋವನ್ನು ಅದೆಷ್ಟೋ ಅಭಿಮಾನಿಗಳು ಮನೆಯಲಿಟ್ಟು ಪೂಜೆ ಮಾಡಿರುವ ಉದಾಹರಣೆಗಳಿವೆ. ಕೆಲ‌‌ವು ದಿನಗಳ ಹಿಂದೆ ಡಾ. ರಾಜ್​​​​​​ಕುಮಾರ್ ಭಾವಚಿತ್ರ ಇರುವ ಅಂಗಿಯನ್ನು ಮೊಮ್ಮಗ ಧೀರೆನ್ ರಾಮ್​​​​​​​​​​​​​​​ಕುಮಾರ್ ಧರಿಸುವ ಮೂಲಕ ಸುದ್ದಿಯಲ್ಲಿದ್ದರು. ಅಣ್ಣಾವ್ರು ನಟಿಸಿರುವ, ಆಪರೇಷನ್‌ ಡೈಮಂಡ್​​​ ರಾಕೆಟ್‌, ಕಸ್ತೂರಿ ನಿವಾಸ ಮತ್ತು ಮೇಯರ್‌ ಮುತ್ತಣ್ಣ ಚಿತ್ರಗಳ ಭಾವಚಿತ್ರಗಳಿರುವ ಅಂಗಿಯನ್ನು ಧೀರೆನ್ ಧರಿಸಿ ಟ್ರೆಂಡ್ ಸೃಷ್ಟಿಸಿದ್ದರು. ಇದೀಗ ಮಾವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾವಚಿತ್ರ ಇರುವ ಶರ್ಟ್​​ ನ್ನು ಧರಿಸಿ ಗಮನ ಸೆಳೆದಿದ್ದಾರೆ. ಈ ಶರ್ಟ್ ಮೇಲೆ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಹಾಗೂ ಕಳೆದ ವರ್ಷ ಬಹಳ ಸೌಂಡ್ ಮಾಡಿದ 'ಮಫ್ತಿ' ಚಿತ್ರದ ಬೈರತಿ ರಣಗಲ್ ಭಾವಚಿತ್ರಗಳು ಇವೆ. ಈ ಫೋಟೋಗಳನ್ನು ಧೀರೆನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details