ಕರ್ನಾಟಕ

karnataka

ETV Bharat / sitara

ಚೊಚ್ಚಲ ಸಿನಿಮಾದಲ್ಲೇ ಮಾನ್ವಿತಾ ಜತೆ ಲಿಪ್‌ಲಾಕ್ ಮಾಡಿದ ಧೀರೇನ್ ರಾಮ್‌ಕುಮಾರ್ - ಧೀರೇನ್ ರಾಮ್ ಕುಮಾರ್ ಮಾನ್ವಿತಾ ಅಭಿನಯದ ಶಿವ 143

ಇಂದು ಪ್ರೇಮಿಗಳ ದಿನಕ್ಕೆ ಆ ಕ್ಯೂರ್ಯಾಸಿಟಿಗೆ ತೆರೆ ಬಿದ್ದಿದೆ. ಧೀರೇನ್ ರಾಮ್ ಕುಮಾರ್ ಅಭಿನಯದ ಶಿವ 143 ಸಿನಿಮಾದ ಮೊದಲ ಹಾಡನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಧೀರೇನ್ ರಾಮ್ ಕುಮಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಕೆಂಡಸಂಪಿಗೆ ಬೆಡಗಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ..

ಶಿವ 143  ಸಿನಿಮಾ
ಶಿವ 143 ಸಿನಿಮಾ

By

Published : Feb 14, 2022, 7:06 PM IST

Updated : Feb 14, 2022, 7:14 PM IST

ಡಾ.ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿಗಳು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕಳೆದ ವರ್ಷ ರಾಮ್ ಕುಮಾರ್ ಹಾಗೂ ಪೂರ್ಣಿಮಾರ ಮಗಳು ಧನ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಿನಿಮಾ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಇದೀಗ ರಾಮ್‌ಕುಮಾರ್ ಹಾಗೂ ಪೂರ್ಣಿಮಾರ ಸುಪುತ್ರ ಧೀರೇನ್ ರಾಮ್‌ಕುಮಾರ್ ಕೂಡ ಶಿವ 143 ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರೋದು ಗೊತ್ತಿರುವ ವಿಚಾರ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ, ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಈ ಚಿತ್ರದಲ್ಲಿ ರಾಜ್‌ಕುಮಾರ್ ಮೊಮ್ಮಗ ಧೀರೇನ್ ರಾಮ್‌ಕುಮಾರ್ ಹೇಗೆ ಕಾಣಿಸುತ್ತಾನೆ ಅನ್ನೋದು ದೊಡ್ಮನೆ ಅಲ್ಲದೆ, ರಾಜವಂಶದ ಅಭಿಮಾನಿಗಳಲ್ಲಿ ಕುತೂಹಲವಿತ್ತು.

ಇಂದು ಪ್ರೇಮಿಗಳ ದಿನಕ್ಕೆ ಆ ಕ್ಯೂರಿಯಾಸಿಟಿಗೆ ತೆರೆ ಬಿದ್ದಿದೆ. ಧೀರೇನ್ ರಾಮ್‌ಕುಮಾರ್ ಅಭಿನಯದ ಶಿವ 143 ಸಿನಿಮಾದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಧೀರೇನ್ ರಾಮ್ ಕುಮಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಕೆಂಡಸಂಪಿಗೆ ಬೆಡಗಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಮಳೆ ಹನಿಯೇ ಎಂಬ ರೋಮ್ಯಾಟಿಂಕ್ ಹಾಡು ಇದಾಗಿದ್ದು, ಈ ಹಾಡಿನಲ್ಲಿ ಧೀರೇನ್‌ ಮತ್ತು ಮಾನ್ವಿತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಧೀರೇನ್ ರಾಮ್ ಕುಮಾರ್, ಮಾನ್ವಿತಾ ಜೊತೆಗೆ ಲಿಪ್‌ಲಾಕ್ ಮಾಡಿದ್ದಾರೆ. ಇವರಿಬ್ಬರ ಲಿಪ್‌ಲಾಕ್ ಸೀನ್ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದೆ. ಅರ್ಜುನ್ ಜನ್ಯ ಸಂಗೀತವಿರುವ ಈ ಸಿನಿಮಾಗೆ, ಕ್ರಾಂತಿಕುಮಾರ್ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ನಿಹಾಲ್ ಮತ್ತು ಪೃಥ್ವಿ ಭಟ್ ಹಾಡಿದ್ದಾರೆ.

ದಿಲ್‌ವಾಲಾ, ರ‍್ಯಾಂಬೊ 2 ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಅನಿಲ್ ಕುಮಾರ್ ಈ ಚಿತ್ರಕ್ಕೂ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಈ ಸಿನಿಮಾ ಸ್ಟಾರ್ಟ್ ಆದಾಗ ಈ ಚಿತ್ರಕ್ಕೆ ದಾರಿ ತಪ್ಪಿದ ಮಗ ಅಂತಾ ಟೈಟಲ್ ಇಡಲಾಗಿತ್ತು. ಆದರೆ, ಕೆಲ ಕಾರಣಗಳಿಂದ ಈ ಟೈಟಲ್ ಕೈಬಿಟ್ಟು ಶಿವ 143 ಅಂತಾ ಇಡಲಾಗಿದೆ. ಲವ್ ಸ್ಟೋರಿ ಜೊತೆಗೆ ಆ್ಯಕ್ಷನ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ಧೀರೇನ್ ಮತ್ತು ಮಾನ್ವಿತಾ ಜೊತೆಗೆ ಚರಣ್ ರಾಜ್‌, ಚಿಕ್ಕಣ್ಣ, ಸಾಧು ಕೋಕಿಲ, ಅವಿನಾಶ್‌ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಜಯಣ್ಣ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು ಜಯಣ್ಣ, ಭೋಗೇಂದ್ರ ಮತ್ತು ಡಾ. ಸೂರಿ ನಿರ್ಮಾಣ ಮಾಡಿದ್ದಾರೆ. ಸದ್ಯ ಧೀರೇನ್ ರಾಮ್ ಕುಮಾರ್ ಸ್ಕ್ರೀನ್ ಮೇಲೆ ಮೋಡಿ ಮಾಡಿದ್ದು, ಭವಿಷ್ಯದಲ್ಲಿ ಭರವಸೆಯ ನಟನಾಗುವ ಸೂಚನೆ ಸಿಗುತ್ತಿದೆ.

Last Updated : Feb 14, 2022, 7:14 PM IST

ABOUT THE AUTHOR

...view details