ಡಾ. ರಾಜ್ಕುಮಾರ್ ಮೊಮ್ಮಗ ಧೀರೇನ್ ರಾಮ್ಕುಮಾರ್ ಅಭಿನಯದ ‘ದಾರಿ ತಪ್ಪಿದ ಮಗ‘ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಇದು ಧೀರೇನ್ ಅಭಿನಯದ ಚೊಚ್ಚಲ ಸಿನಿಮಾ.
‘ದಾರಿ ತಪ್ಪಿದ ಮಗ‘ ಚಿತ್ರೀಕರಣ ಮುಕ್ತಾಯ: ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆ - undefined
ಧೀರೇನ್ ರಾಮ್ಕುಮಾರ್ ಅಭಿನಯದ ಮೊದಲ ಸಿನಿಮಾ ‘ದಾರಿ ತಪ್ಪಿದ ಮಗ‘ ಶೂಟಿಂಗ್ ಮುಗಿದಿದ್ದು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅನಿಲ್ ಕುಮಾರ್ ನಿರ್ದೇಶನದ ಸಿನಿಮಾ ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ.
![‘ದಾರಿ ತಪ್ಪಿದ ಮಗ‘ ಚಿತ್ರೀಕರಣ ಮುಕ್ತಾಯ: ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆ](https://etvbharatimages.akamaized.net/etvbharat/prod-images/768-512-3740347-thumbnail-3x2-daritappidamaga.jpg)
ಧೀರೇನ್, ಡಾ. ರಾಜ್ಕುಮಾರ್ ಪುತ್ರಿ ಪೂರ್ಣಿಮಾ ಹಾಗೂ ರಾಮ್ಕುಮಾರ್ ಪುತ್ರ. 1975 ರಲ್ಲಿ ಬಿಡುಗಡೆಯಾದ ‘ದಾರಿ ತಪ್ಪಿದ ಮಗ‘ ಸಿನಿಮಾದಲ್ಲಿ ಡಾ. ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಧೀರೇನ್ ಯಾವ ಕಾರಣಕ್ಕೆ ದಾರಿ ತಪ್ಪುತ್ತಾರೆ. ನಂತರ ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದು ಕಥಾವಸ್ತು. ಸುಮಾರು 72 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಜರುಗಿದೆ. ಶ್ರೀರಂಗಪಟ್ಟಣದಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಜರುಗಿದೆ.
ಜಯಣ್ಣ ಫಿಲಮ್ಸ್ ಬ್ಯಾನರ್ ಅಡಿ ಜಯಣ್ಣ ಹಾಗೂ ಭೋಗೇಂದ್ರ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಧೀರೇನ್ಗೆ ನಾಯಕಿಯಾಗಿ ಮಾನ್ವಿತ ಕಾಮತ್ ನಟಿಸಿದ್ದಾರೆ. ಉಳಿದಂತೆ ಚರಣ್ ರಾಜ್, ಸಾಧು ಕೋಕಿಲ, ಚಿಕ್ಕಣ್ಣ ಕೂಡಾ ಪಾತ್ರವರ್ಗದಲ್ಲಿದ್ದಾರೆ. ಅರ್ಜುನ್ ಜನ್ಯ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಅನಿಲ್ ಕುಮಾರ್ ಅವರದ್ದು. ಶೀಘ್ರದಲ್ಲೇ ಚಿತ್ರದ ಟೀಸರ್, ಆಡಿಯೋ ಬಿಡುಗಡೆ ಮಾಡಿ ಅಕ್ಟೋಬರ್ನಲ್ಲಿ ಸಿನಿಮಾ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.