ನವದೆಹಲಿ:ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ಡಿಯೋಲ್ ಅವರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ಲೂಧಿಯಾನದ ಹಳೆಯ ರೈಖಿ ಸಿನಿಮಾ ಮಂದಿರದ ಕುರಿತಾಗಿ ಮಾತನಾಡಿರುವ ಅವರು, ಸದ್ಯ ಶಿಥಿಲಾವಸ್ಥೆಯಲ್ಲಿರುವ ಥಿಯೇಟರ್ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಈ ಕುರಿತು ಮಾತನಾಡಿದ ಅವರು, "ರೈಖಿ ಸಿನಿಮಾ, ಲೂಧಿಯಾನ. ನಾನು ಒಂದು ಕಾಲದಲ್ಲಿ ಈ ಚಿತ್ರಮಂದಿರಲ್ಲಿ ಅನೇಕ ಸಿನಿಮಾಗಳನ್ನು ವೀಕ್ಷಿಸಿದ್ದೇನೆ, ಆದರೆ ಈ ಚಿತ್ರಮಂದಿರದ ಸದ್ಯದ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತಿದೆ" ಎಂದಿದ್ದಾರೆ.