ಸ್ಯಾಂಡಲ್ವುಡ್ ಕ್ಯಾಡ್ಬರಿ ಧರ್ಮ ಕೀರ್ತಿರಾಜ್ ರೊಚ್ಚಿಗೆದ್ದಿದ್ದು ಈಗ 'ತಲ್ವಾರ್' ಹಿಡಿಯೋಕೆ ರೆಡಿಯಾಗಿದ್ದಾರೆ. ಅಲ್ಲದೆ ತಲ್ವಾರ್ ಹಿಡಿದಿರುವ ಧರ್ಮಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿದ್ದಾರೆ.ಇಷ್ಟು ದಿನ ಲವರ್ ಬಾಯ್ ಆಗಿ ಮಿಂಚಿದ್ದ ಧರ್ಮ ಕೀರ್ತಿರಾಜ್ ಈಗ ಈ ಚಿತ್ರದ ಮೂಲಕ ಅಂಡರ್ವರ್ಲ್ಡ್ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.
'ತಲ್ವಾರ್' ಹಿಡಿದ ನವಗ್ರಹ ನಟನಿಗೆ ಸಾಥ್ ಕೊಟ್ಟ ಡಿ ಬಾಸ್, ಕ್ಲಾಪ್ ಮಾಡಿ ಹಾರೈಸಿದ ದಾಸ - ರೌಡಿಸಂ ಕಥೆ
ಇಷ್ಟು ದಿನ ಸ್ಯಾಂಡಲ್ವುಡ್ನಲ್ಲಿ ಚಾಕೊಲೇಟ್ ಹೀರೋ ಆಗಿ ಮಿಂಚಿದ್ದ ಧರ್ಮ ಕೀರ್ತಿರಾಜ್ ಈಗ ಪಕ್ಕಾ ಮಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ 'ತಲ್ವಾರ್' ಎಂದು ಹೆಸರಿಡಲಾಗಿದ್ದು ಮುರಳಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇಂದು ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ 'ತಲ್ವಾರ್' ಚಿತ್ರದ ಮುಹೂರ್ತ ನೇರವೇರಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ದರ್ಶನ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರಕ್ಕಾಗಿ ಧರ್ಮ ಗೆಟಪ್ ಬದಲಾಯಿಸಿಕೊಂಡು ಪಕ್ಕಾ ಮಾಸ್ ಲುಕ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದೊಂದು ಪಕ್ಕಾ ರೌಡಿಸಂ ಕಥೆ ಹೊಂದಿರುವ ಮಾಸ್ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಈ ಹಿಂದೆ ಧರ್ಮ ಕೀರ್ತಿರಾಜ್ ಅಭಿನಯದ 'ಮಮ್ತಾಜ್' ಚಿತ್ರವನ್ನು ನಿರ್ದೇಶನ ಮಾಡಿದ್ದ ಮುರಳಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಅಖಿರ' ಚಿತ್ರದಲ್ಲಿ ನಟಿಸಿದ್ದ ಅದಿತಿ ರಾವ್ ಈ ಸಿನಿಮಾಗೆ ಧರ್ಮ ಜೊತೆ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಟಚ್ ಸ್ಟೋನ್ ಪಿಕ್ಚರ್ಸ್ ಬ್ಯಾನರ್ ಅಡಿ ಸುರೇಶ್ ಬೈರಸಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಸುರೇಶ್ ಈ ಹಿಂದೆ 'ಬಹುಪರಾಕ್' ಚಿತ್ರವನ್ನು ನಿರ್ಮಿಸಿದ್ದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, 'ಮಮ್ತಾಜ್' ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರವೀಣ್ ಕುಮಾರ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ.