ಕನ್ನಡ ಚಿತ್ರ ರಂಗದ ಕ್ಯಾಡ್ಬರಿ ಎಂದು ದರ್ಶನ್ ಅವರಿಂದ ಕರೆಸಿಕೊಂಡು ‘ನವಗ್ರಹ’ ಸಿನಿಮಾದಿಂದ ಧರ್ಮ ಕೀರ್ತಿರಾಜ್ ತಮ್ಮ ನೆಲೆಯನ್ನು ಭದ್ರ ಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇವರು ಹಿರಿಯ ಖಳನಟ ಕೀರ್ತಿರಾಜ್ ಅವರ ಪುತ್ರ.
ಧರ್ಮ ಕೀರ್ತಿರಾಜ್ ಅಂದರೆ ದರ್ಶನ್ ಅವರಿಗೆ ಬಲು ಪ್ರೀತಿ. ಧರ್ಮ ಅಭಿನಯದ ‘ಚಾಣಾಕ್ಷ’ ಚಿತ್ರಕ್ಕೆ ದರ್ಶನ್ ವಿಶ್ ಮಾಡಿದ್ದಾರೆ. ಈಗ ಧರ್ಮ ಕೀರ್ತಿರಾಜ್ ‘ಖಡಕ್’ ಎಂಬ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾಗೆ ಇದೇ ತಿಂಗಳ 27 ರಂದು ಮುಹೂರ್ತ ಜರುಗಲಿದೆ. ಧರ್ಮ ಅಭಿನಯದ ‘ವಿವಿಕ್ತ’ ಮತ್ತು ‘ಜಾಸ್ತಿ ಪ್ರೀತಿ’ ಸಿನಿಮಾಗಳ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿದೆ.
‘ಚಾಣಾಕ್ಷ‘ ಚಿತ್ರದಲ್ಲಿ ಧರ್ಮ ಲವರ್ ಬಾಯ್ ಕ್ಯಾರೆಕ್ಟರ್ನಿಂದ ಆ್ಯಕ್ಷನ್ಗೆ ಇಳಿದಿದ್ದಾರೆ. ಚಿತ್ರದ ಆರಂಭದಲ್ಲೇ 8 ನಿಮಿಷಗಳ ಎದೆ ನಡುಗಿಸುವ ಚೇಸಿಂಗ್ ಸೀನ್ ಇದೆಯಂತೆ. ಥ್ರಿಲ್ಲರ್ ಮಂಜು ಅವರು ‘ಲಾಕ್ ಅಪ್ ಡೆತ್’ ಸಿನಿಮಾಗೆ ಮಾಡಿದ ಹಾಗೆ ಭರ್ಜರಿ ಸಾಹಸ ದೃಶ್ಯ ಮಾಡಿದ್ದಾರೆ. ಧರ್ಮ ಈ ಸಾಹಸಮಯ ದೃಶ್ಯಗಳಿಗಾಗಿ 3 ತಿಂಗಳು ತರಬೇತಿ ಕೂಡಾ ಪಡೆದಿದ್ದಾರಂತೆ. ಥ್ರಿಲ್ಲರ್ ಮಂಜು, ವಿನೋದ್ ಹಾಗೂ ಡಿಫರೆಂಟ್ ಡ್ಯಾನಿ ಮೂವರೂ ಒಂದೊಂದು ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನು ‘ಚಾಣಾಕ್ಷ’ ಚಿತ್ರಕ್ಕೆ 40 ಲಕ್ಷ ರೂಪಾಯಿ ಹಿಂದಿ ಡಬ್ಬಿಂಗ್ ರೈಟ್ ದೊರಕಿರುವುದು ನಿರ್ದೇಶಕ ಮಹೇಶ ಚಿನ್ಮಯಿ ಹಾಗೂ ತಂಡಕ್ಕೆ ಖುಷಿಯಾಗಿದೆ. ಈ ಚಿತ್ರ ಧರ್ಮ ಅವರಿಗೆ ಬ್ರೇಕ್ ನೀಡಲಿದೆಯಾ ಕಾದು ನೋಡಬೇಕು.