ಕರ್ನಾಟಕ

karnataka

ETV Bharat / sitara

ಬಜಾರ್​ ಹೀರೊ ಧನ್ವೀರ್​ 'ಬ'ಕಾರವೇ ಲಕ್ಕಿ... ಎರಡನೇ ಸಿನಿಮಾಗೂ 'ಬ' ಅಕ್ಷರದಿಂದಲೇ ಟೈಟಲ್ - ಧನ್ವೀರ್ ತಂದೆ ತಿಮ್ಮೇಗೌಡ

‘ಬಜಾರ್’ ಚಿತ್ರದಿಂದ ಸ್ಯಾಂಡಲ್​​ವುಡ್​​​​ಗೆ ಕಾಲಿಟ್ಟ ಭರವಸೆಯ ನಟ ಧನ್ವೀರ್​, ಇದೀಗ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಈ ಸಿನಿಮಾ ಕೂಡಾ ‘ಬ‘ ಅಕ್ಷರದಿಂದ ಆರಂಭವಾಗಲಿದ್ದು ‘ಬಂಪರ್‘ ಎಂದು ಹೆಸರಿಡಲಾಗಿದೆ. ಚಿತ್ರವನ್ನು ಸಂತು ನಿರ್ದೇಶಿಸುತ್ತಿದ್ದಾರೆ.

ಧನ್ವೀರ್

By

Published : Sep 6, 2019, 10:00 AM IST

ಕೆಲವು ಅಕ್ಷರಗಳಿಂದ ಆರಂಭವಾಗುವ ಶೀರ್ಷಿಕೆ ಕೆಲವು ನಟರಿಗೆ ಅದೃಷ್ಟ ಎಂದೇ ಹೇಳಬಹುದು. ಯುವ ನಟ ಧನ್ವೀರ್​​​ ‘ಬಜಾರ್’ ಆದ ಮೇಲೆ ಮತ್ತೆ ‘ಬ’ ಅಕ್ಷರದಿಂದ ಸಿನಿಮಾ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದಾರೆ. ಆ ಸಿನಿಮಾಗೆ ‘ಬಂಪರ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಕೂಡಾ ಬಾಕ್ಸ್ ಆಫೀಸಿನಲ್ಲಿ ಬಂಪರ್ ಹೊಡೆಯಬೇಕು ಎನ್ನುವುದು ಎಲ್ಲರ ಹಾರೈಕೆ.

'ಅಲೆಮಾರಿ' ಖ್ಯಾತಿಯ ಸಂತು ಈ ‘ಬಂಪರ್’ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಅದಕ್ಕೂ ಮುನ್ನ ಅವರು ‘ಬಿಚ್ಚುಗತ್ತಿ’ ಸಿನಿಮಾಕ್ಕೆ ಫೈನಲ್ ಟಚ್​​​​​​​​​​​​​​​​​​​​​​​​​​​​​​​​​​​​ ನೀಡಲಿದ್ದಾರೆ. ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ರಾಜವರ್ಧನ್​​​​​​​​​​​ ವೃತ್ತಿ ಜೀವನದ ಬಹಳ ದೊಡ್ಡ ಸಿನಿಮಾ. ಇದು ಈಗ ಅಂತಿಮ ಹಂತದಲ್ಲಿದೆ. ಈ ಹಿಂದೆ ಸಂತು ನಿರ್ದೇಶನದ ‘ಕಾಲೇಜು ಕುಮಾರ’ ಯಶಸ್ಸನ್ನು ಕಂಡಿತ್ತು. ಸೆಪ್ಟೆಂಬರ್ 8 ಧನ್ವೀರ್ ಹುಟ್ಟುಹಬ್ಬವಾಗಿದ್ದು ಅವರ ಹೊಸ ಸಿನಿಮಾ ‘ಬಂಪರ್​‘ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತ ಸಾಹಿತ್ಯ ಕೂಡಾ ರಚಿಸಿದ್ದಾರೆ.

ಧನ್ವೀರ್​​​​ ‘ಬಜಾರ್’ ಸಿನಿಮಾ ಯಶಸ್ಸಿನ ಸಂದರ್ಭದಲ್ಲಿ ವಿತರಕ ಸುಪ್ರೀತ್ ಧನ್ವೀರ್ ಜೊತೆ ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಸುಪ್ರೀತ್ ಈಗ 'ಬಂಪರ್​​' ಚಿತ್ರಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಕೌಟುಂಬಿಕ ಚಿತ್ರವಾಗಿದ್ದು ಮೊದಲ ಚಿತ್ರಕ್ಕೂ ಎರಡನೇ ಸಿನಿಮಾಗೂ ಬಹಳ ವ್ಯತ್ಯಾಸ ಇದೆ ಎನ್ನಲಾಗಿದೆ. ‘ಬಜಾರ್’ ಸಿನಿಮಾವನ್ನು ಧನ್ವೀರ್ ತಂದೆ ತಿಮ್ಮೇಗೌಡ ನಿರ್ಮಿಸಿದ್ದು ಸಿಂಪಲ್ ಸುನಿ ನಿರ್ದೇಶಿಸಿದ್ದರು.

ABOUT THE AUTHOR

...view details