"ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್'' ನಂತರ, ಈಗ ತಮಿಳು ಸ್ಟಾರ್ ನಟ ಧನುಷ್ ಅವರ ಚಿತ್ರ ಜಗಮೆ ತಾಂಧಿರಾಮ್ಗೆ ಪೈರಸಿ ಕಾಟ ಶುರುವಾಗಿದೆ. ತಮಿಳುರಾಕರ್ಸ್ ಮತ್ತು ಟೆಲಿಗ್ರಾಮ್ನಲ್ಲಿ ಕಿಡಿಗೇಡಿಗಳು ಜಗಮೆ ತಂಧಿರಾಮ್ ಅನ್ನು ಲೀಕ್ ಮಾಡಿದ್ದಾರೆ. ಈ ಚಿತ್ರವು ಇಂದು ಮಧ್ಯಾಹ್ನ 12: 30 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಯಿತು. ಆದರೆ, ಚಂದಾದಾರರು ಅದನ್ನು ನೋಡುವ ಮೊದಲೇ ಜಗಮೆ ತಾಂಧಿರಾಮ್ ಪೈರಸಿ ವೆಬ್ಸೈಟ್ಗಳಲ್ಲಿ ಕಾಣಿಸಿಕೊಂಡಿದೆ.
ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ಸೇರಿದಂತೆ ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಕಲೈರಸನ್ , ಶರತ್ ರವಿ, ಜೇಮ್ಸ್ ಕೋಸ್ಮೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಗಮೆ ತಾಂಧಿರಾಮ್ ಆರಂಭದಲ್ಲಿ ಥಿಯೇಟರ್ನಲ್ಲಿಯೇ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಕೊರೊನಾ ಲಾಕ್ಡೌನ್ ಕಾರಣಕ್ಕೆ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದರಿಂದ OTT ಯಲ್ಲಿ ಸಿನಿಮಾ ಬಿಡುಗಡೆಯಾಗಿದೆ.